ಕಾಂಗ್ರೆಸ್ನ 15ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ: ಅಲ್ಪೇಶ್ ಠಾಕೂರ್

More than 15 MLAs in Gujarat want to quit Congress, claims Alpesh Thakor

28-05-2019

ಅಹಮದಾಬಾದ್: ನನ್ನ ಜನ ಬಡವರು ಮತ್ತು ಹಿಂದುಳಿದವರು. ಅವರಿಗೆ ಸರ್ಕಾರದ ಬೆಂಬಲದ ಅಗತ್ಯವಿದೆ ಎಂದು ಗುಜರಾತ್ ಶಾಸಕ ಮತ್ತು ಕಾಂಗ್ರೆಸ್ ತೊರೆದ ನಾಯಕ ಅಲ್ಪೇಶ್ ಠಾಕೂರ್ ಹೇಳಿದರು.

ನನ್ನ ಜನರಿಗೆ ಅಗತ್ಯವಾಗಿರುವುದನ್ನು ಕೊಡಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಆದ್ದರಿಂದ ನನಗೆ ತೊಂದರೆಯಾಗಿದೆ. ನನ್ನ ಸಂಘಟನೆ ನಮಗೆ ಎಲ್ಲಿ ಗೌರವ ಇಲ್ಲವೋ ಅಲ್ಲಿ ನಾವಿರಬಾರದು ಎಂದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದೆ. ಅಲ್ಲಿ (ಕಾಂಗ್ರೆಸ್‍ನಲ್ಲಿ) ತಮ್ಮ ಹಕ್ಕುಗಳ ಕುರಿತು ಮಾತೇ ಇಲ್ಲ ಎಂದು ಅವರು ಆರೋಪಿಸಿದರು.

ಇದು ನಮ್ಮ ನಿರ್ಧಾರ ಮತ್ತು ಒಮ್ಮತದ ನಿರ್ಧಾರದ ಪ್ರಕಾರ ನಾವು ಕಾಂಗ್ರೆಸ್‍ನಲ್ಲಿ ಇರಬಾರದು ಎಂದು ನಿರ್ಧರಿಸಿದ್ದೇವೆ. ನಾವು ನಮ್ಮ ಬಡ ಜನರಿಗೆ ಕೆಲಸ ಮಾಡಬಯಸುತ್ತೇವೆ ಎಂದ ಅವರು, ಕೆಲವು ದಿನ ಕಾಯ್ದು ನೋಡಿ. 15ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆ. ಎಲ್ಲರಲ್ಲೂ ದುಃಖವಿದೆ. ಅರ್ಧಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಅಸಮಧಾನ ಹೊಂದಿದ್ದಾರೆ ಎಂದರು.


ಸಂಬಂಧಿತ ಟ್ಯಾಗ್ಗಳು

MLA Alpesh Thakor Gujarat Congress


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ