ಕಳಪೆ ಆಹಾರದಿಂದ ಕ್ಯಾನ್ಸರ್: ಅಧ್ಯಯನ

Poor Diet Packed With Junk and Processed Food May Up Cancer Risk: Study

28-05-2019

ಕಳಪೆ ಆಹಾರ ಸೇವನೆಯಿಂದ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನ ವರದಿಯೊಂದು ಪ್ರಕಟವಾಗಿದೆ. ಹೌದು, ಅದನ್ನ ತಿಂದರೆ ಏನಾಗುತ್ತೆ? ಇದನ್ನ ತಿಂದರೆ ಏನೂ ಆಗೋಲ್ಲ ಎಂಬುವವರಿಗೆ ಆಘಾತಕಾರಿ ಸಂಗತಿಯೊಂದು ಎದುರಾಗಿದೆ. ಕಳಪೆ ಆಹಾರ ಸೇವಿಸುವುದರಿಂದ ಅನೇಕ ರೋಗಗಳು ಬರುವುದಲ್ಲದೇ, ಮಾರಣಾಂತಿಕ ಕ್ಯಾನ್ಸರ್ ರೋಗ ಕೂಡ ಕಾಡಬಹುದು.

ಜೆಎನ್‍ಸಿಐ ಕ್ಯಾನ್ಸರ್ ಸ್ಪೆಕ್ಟ್ರಂ ಸಂಸ್ಥೆ ಜಗತ್ತಿನಾದ್ಯಂತ ನಡೆಸಿರುವ ಅಧ್ಯಯನದಲ್ಲಿ ಈ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಜಗತ್ತಿನ 80,000 ಜನರಿಗೆ ಕಳಪೆ ಆಹಾರದಿಂದಲೇ ಕ್ಯಾನ್ಸರ್ ರೋಗ ಬಂದಿದೆಯಂತೆ. ಇದರ ಪ್ರಮಾಣ ಶೇ. 5ರಷ್ಟು ಎನ್ನುವುದು ವರದಿಯ ಸಾರಾಂಶವಾಗಿದೆ.

2015ರಿಂದ ಫ್ರೀಡ್ಮನ್ ಸ್ಕೂಲ್ ಆಫ್ ನ್ಯೂಟ್ರಿಷನ್ ಸೈನ್ಸ್ ಅಂಡ್ ಪಾಲಿಸಿ ಸಂಸ್ಥೆಯವರು ಅಮೆರಿದಲ್ಲಿ ವಯಸ್ಕರ ಆಹಾರ ಪದ್ಧತಿ ಕುರಿತು ಅಧ್ಯಯನ ನಡೆಸಿದ್ದಾರೆ. ಕಳಪೆ ಆಹಾರ ಸೇವಿಸುವುದರಿಂದ ಯಾವೆಲ್ಲ ಬಗೆಯ ಆರೋಗ್ಯ ಸಮಸ್ಯೆ ಎದುರಾಗುತ್ತವೆ ಎಂಬುದರ ಕುರಿತು ಸಂಶೋಧನೆ ನಡೆಸಿದ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ವಿಶೇಷವಾಗಿ ಕಳಪೆ ಗುಣಮಟ್ಟದ ತರಕಾರಿಗಳು, ಹಣ್ಣುಗಳು, ಬೇಳೆಕಾಳುಗಳು ಮತ್ತು ಉನ್ನತಮಟ್ಟದ ಸಂಸ್ಕರಿಸಿದ ಸಕ್ಕರೆ, ಸಕ್ಕರೆಯುಕ್ತ ಪಾನೀಯಗಳು ಮತ್ತು ಮಾಂಸ ಸೇವನೆಯಿಂದ ಕ್ಯಾನ್ಸರ್ ಪೀಡಿತರಾಗಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆಯಂತೆ.

ಇನ್ನು ಮದ್ಯಪಾನ ವ್ಯಸನ ಉಳ್ಳವರಿಗೆ ಕೂಡ ಕ್ಯಾನ್ಸರ್ ರೋಗ ಕಾಡಿದೆಯಂತೆ. ಇಂತಹವರ ಪ್ರಮಾಣ ಶೇ. 4-6ರಷ್ಟಾದರೆ, ದೇಹದ ತೂಕ ಹೆಚ್ಚಾದವರಿಗೆ ಕ್ಯಾನ್ಸರ್ ಪೀಡಿಸಿರುವ ಪ್ರಮಾಣ ಶೇ. 7-8, ದೈಹಿಕ ಚಟುವಟಿಕೆಯನ್ನೇ ಮಾಡದ ಶೇ. 2-3ರಷ್ಟು ಜನರಿಗೆ ಕೂಡ ಕ್ಯಾನ್ಸರ್ ಬಾಧಿಸಿದೆ ಎಂದು ಅಧ್ಯಯನ ಸಂಸ್ಥೆ ವರದಿ ನೀಡಿದೆ.

ಇನ್ನೇಕೆ ತಡ? ಉತ್ತಮ ಆರೋಗ್ಯಕ್ಕಾಗಿ ಕಳಪೆ ಆಹಾರಗಳನ್ನು ಬಿಡಿ. ದೈಹಿಕ ಕಸರತ್ತು ನೀಡುವ ವ್ಯಾಯಾಮಗಳನ್ನು ಮಾಡಿ. ಮದ್ಯಪಾನವನ್ನು ಕೈಬಿಡಿ. ಕ್ಯಾನ್ಸರ್ ನಿಂದ ದೂರ ಇರಿ ಅನ್ನೋದು ಆರೋಗ್ಯ ಪರಿಣತರ ಸಲಹೆ.


ಸಂಬಂಧಿತ ಟ್ಯಾಗ್ಗಳು

Diet Cancer Junk Study


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ