ಹೆತ್ತ ತಾಯಿಯ ಚಿಕಿತ್ಸೆಗಾಗಿ ಭಿಕ್ಷೆ ಬೇಡಿದ ಬಾಲಕಿ

Small Girl is take care of her mother

28-05-2019

ಕೊಪ್ಪಳ: ಇದೊಂದು ಕರುಣಾಜನಕ ಕತೆ. ಈ ಬಾಲಕಿಗೆ ಕೇವಲ ಆರು ವರ್ಷ. ಎಲ್ಲ ಮಕ್ಕಳಂತೆ ಆಡಿಕೊಂಡು, ಶಾಲೆಗೆ ಹೋಗಬೇಕಾದ ಈ ಭಾಗ್ಯಶ್ರೀಗೆ ಅಂತಹ ಭಾಗ್ಯವೇ ಇಲ್ಲ. ಹೆಸರಿನಲ್ಲಿ ಮಾತ್ರ ಭಾಗ್ಯವಂತೆಯಾಗಿರುವ ಈಕೆ ತಾಯಿಗಾಗಿ ಭಿಕ್ಷೆ ಬೇಡಿದ್ದಾಳೆ.  

ಹೌದು, ತಾಯಿ, ತಂದೆಯ ಆರೈಕೆ, ಪೋಷಣೆಯಲ್ಲಿ ಬೆಳೆಯಬೇಕಾದ ಇವಳು ರೋಗಗ್ರಸ್ಥ ತಾಯಿಯ ಚಿಕಿತ್ಸೆಗಾಗಿ ಹಾದಿಬೀದಿಗಳ ಬದಿಯಲ್ಲಿ ದಾರಿಹೋಕರ ಬಳಿ ಭಿಕ್ಷೆ ಬೇಡಿ, ತಾಯಿಗೆ ಚಿಕಿತ್ಸೆ ಕೊಡಿಸುತ್ತಿದ್ದಾಳೆ. ಅವಳು ಭಿಕ್ಷೆ ಬೇಡಿ ಹಣ ಹೊಂದಿಸಿ ತಂದ ದುಡ್ಡಿನಲ್ಲೇ ತನ್ನ ತಾಯಿಗೆ ಊಟ, ಉಪಹಾರದ ವ್ಯವಸ್ಥೆಯನ್ನೂ ಮಾಡುತ್ತಿದ್ದಳು.

ಈಕೆಗೆ ತಂದೆ ಇಲ್ಲ. ಇವಳ ಪರಿಸ್ಥಿತಿಯನ್ನು ನೋಡಿದ ಒಬ್ಬರು ತಾಯಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿಯನ್ನೂ ಕೊಟ್ಟರು. ಕಡೆಗೆ ಇಲಾಖೆ ಇಬ್ಬರನ್ನೂ ನೋಡಿಕೊಳ್ಳುತ್ತಿದೆ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ.


ಸಂಬಂಧಿತ ಟ್ಯಾಗ್ಗಳು

Karnataka Mother Koppal Mother


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ