ರಾಮನ ಕೆಲಸವನ್ನು ಮಾಡಬೇಕು: ಮೋಹನ್ ಭಾಗವತ್

Mohan Bhagwath Statement

27-05-2019

ಉದಯಪುರ: ರಾಮನ ಕೆಲಸವನ್ನು ನಾವು ಮಾಡಬೇಕು. ಈ ಜವಾಬ್ದಾರಿಯನ್ನು ನಾವು ಇನ್ನೊಬ್ಬರಿಗೆ ಕೊಟ್ಟಿದ್ದೇವೆ. ಅದರೆಡೆಗೆ ಒಂದು ಕಣ್ಣಿಡಬೇಕು ಎಂದು ಆರ್‍ಎಸ್ಎಸ್‍ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಉದಯಪುರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಮಮಂದಿನ ನಿರ್ಮಾಣ ವಿಷಯವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 303 ಲೋಕಸಭೆ ಕ್ಷೇತ್ರಗಳಲ್ಲಿ ದಿಗ್ವಿಜಯ ಸಾಧಿಸಿತ್ತು. ನಂತರ ಬಿಜೆಪಿ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ಕಟ್ಟುತ್ತದೆಯೇ? ಎಂಬ ಪ್ರಶ್ನೆ ಎದುರಾಗಿತ್ತು. ಇದೀಗ ಮೋಹನ್ ಭಾಗವತ್ ಅವರೇ ಈ ವಿಷಯವನ್ನು ಪ್ರಸ್ತಾಪಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಚುನಾವಣಾ ಆಯೋಗ ಯೋಧರು, ಸೈನ್ಯ, ಕೋಮು ಇತ್ಯಾದಿಗಳ ಹೆಸರಿನಲ್ಲಿ ಮತ ಕೇಳುವಂತಿಲ್ಲ ಎಂದು ಹೇಳಿತ್ತು. ಆದರೆ, ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಮತ್ತು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ರಾಮ ಮಂದಿರ ಮತ್ತು ತ್ರಿವಳಿ ತಲಾಖ್ ವಿಷಯವನ್ನು ಪ್ರತಿಪಾದಿಸಿ ಮತ ಕೇಳಿದ್ದರು.

ಬಾಬ್ರಿ ಮಸೀದಿ – ರಾಮ ಜನ್ಮ ಭೂಮಿ ವಿವಾದ ಸದ್ಯಕ್ಕೆ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಮೂವರು ಮಧ್ಯಸ್ಥಿಕೆದಾರರು ಸುಪ್ರೀಂ ಕೋರ್ಟ್‍ಗೆ ಆಗಸ್ಟ್ 15ರ ಒಳಗೆ ತಮ್ಮ ವರದಿ ಸಲ್ಲಿಸುವ ಸಾಧ್ಯತೆ ಇದೆ. ಈ ಸಮಿತಿಯಲ್ಲಿ ಮಾಜಿ ನ್ಯಾ. ಎಫ್‍ಎಂಐ ಕಲೀಫುಲ್ಲ, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಂ ಪಂಚು ಅವರಿದ್ದಾರೆ. ಇವರ ವರದಿಯನ್ನು ಆಧರಿಸಿ ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ನಡೆಸಲಿದೆ.


ಸಂಬಂಧಿತ ಟ್ಯಾಗ್ಗಳು

Mohan Bhagwath Election 2019 RSS PM MOdi


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ