ರೆಡಾರ್ ಬಗ್ಗೆ ಮೋದಿ ಹೇಳಿಕೆ : ಏರ್ ಮಾರ್ಷಲ್ ಸಮರ್ಥನೆ

Air Marshal Raghunath Nambiar Statement

27-05-2019

ದೆಹಲಿ: ಬಾಲಾಕೋಟ್ ವಾಯು ದಾಳಿ ವೇಳೆ ಮೋಡಗಳಿದ್ದವು. ಈ ವೇಳೆ ಕಾರ್ಯಾಚರಣೆ ನಡೆಸುವುದರಿಂದ ರೆಡಾರ್‍ಗಳು ದಾಳಿಯನ್ನು ಪತ್ತೆ ಹಚ್ಚಲಾರವು ಎಂದು ಸುದ್ದಿ ವಾಹಿನಿಗೆ ನೀಡಿದ್ದ ಪ್ರಧಾನಿ ಮೋದಿ ಹೇಳಿಕೆಯನ್ನು ವಾಯುಸೇನೆಯ ಹಿರಿಯ ಅದಿಕಾರಿ ಏರ್ ಮಾರ್ಷಲ್ ರಘುನಾಥ್ ನಂಬಿಯಾರ್ ಸಮರ್ಥಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಮೋಡಗಳು ರೇಡಾರ್‍ಗಳು ಕರಾರುವಕ್ಕಾಗಿ ಗುರುತ್ತಿಸುವುದನ್ನು ತಡೆಯುತ್ತವೆ ಎಂದರು. ಬಲಿಷ್ಠವಾದ ಮೋಡಗಳು ಇರುವ ವೇಳೆ ರೆಡಾರ್‍ಗಳು ಕರಾರುವಕ್ಕಾಗಿ ಗುರುತಿಸಲಾರವು ಎಂದರು.

ನಿನ್ನೆ ಕೇರಳದಲ್ಲಿ ಪ್ರತಿಕ್ರಿಯಿಸಿದ್ದ ಜನರಲ್ ಬಿಪಿನ್ ರಾವತ್, ರೆಡಾರ್‍ಗಳಲ್ಲಿ ಕೆಲವು ಮಾದರಿಗಳಿವೆ. ಅವುಗಳ ಪೈಕಿ ಕೆಲ ರೆಡಾರ್‍ಗಳು ಸೂಕ್ಷ್ಮವಾಗಿ ನೋಡುವ ಸಾಮರ್ಥ್ಯವನ್ನು ಹೊಂದಿವೆ. ಇನ್ನು ಕೆಲವು ನೋಡುವ ಸಾಮರ್ಥ್ಯವನ್ನು ಹೊಂದಿಲ್ಲ. ಕೆಲವು ಮಾದರಿಯ ರೆಡಾರ್‍ಗಳು ಮೋಡ ಇರುವ ಅವಧಿಯಲ್ಲಿ ನಡೆಯುವ ಕಾರ್ಯಾಚರಣೆಯ ಮೇಲೆ ನಿಗಾ ಇಡುವ ಸಾಮರ್ಥ್ಯ ಹೊಂದಿಲ್ಲ ಎಂದಿದ್ದರು.

ಪುಲ್ವಾಮಾದಲ್ಲಿ ಭಯೋತ್ಪಾದಕರು ಸುಮಾರು 300 ಕೆಜಿ ಸುಧಾರಿತ ಸ್ಫೋಟಕಗಳಿದ್ದ ವಾಹನವನ್ನು ಸಿಆರ್‍ಪಿಎಫ್ ವಾಹನಕ್ಕೆ ನುಗ್ಗಿಸಿ 44 ಯೋಧರನ್ನು ಬಲಿತೆಗೆದುಕೊಂಡಿದ್ದರು. ನಂತರ ಪಾಕ್‍ಗೆ ಸೇರಿದ ಖೈಬರ್ ಪಖುಂಥ್ವಾ ಪ್ರಾಂತ್ಯದ ಮೇಲೆ ಭಾರತೀಯ ಯುದ್ಧ ವಿಮಾನ ಮಿರಜ್ 2000ದಲ್ಲಿ ದಾಳಿ ನಡೆಸಲಾಗಿತ್ತು. ಈ ಕುರಿತು ಲೋಕಸಭೆ ಚುನಾವಣೆ ನಡೆಯುತ್ತಿದ್ದ ಅವಧಿಯಲ್ಲಿ ಖಾಸಗಿ ಸುದ್ದಿ ವಾಹಿನಿಯಲ್ಲಿ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿಯವರು, ಮೋಡಗಳಿರುವ ಅವಧಿಯಲ್ಲಿ ರೆಡಾರ್ ಕಣ್ಣು ತಪ್ಪಿಸಿ ದಾಳಿ ನಡೆಸಬಹುದು ಎಂದು ಅಧಿಕಾರಿಗಳಿಗೆ ಹೇಳಿದ್ದೆ. ನಂತರ ದಾಳಿ ನಡೆದಿತ್ತು ಎಂದು ಹೇಳಿ ನಗೆಪಾಟಲಿಗೆ ಗುರಿಯಾಗಿದ್ದರು. ನಂತರ “ರಾತ್ರಿ ಹೊತ್ತಿನಲ್ಲಿ ಸೂರ್ಯಯಾನಕ್ಕೆ ಕಳುಹಿಸೋಣ” ಎಂದು ಪ್ರಧಾನಿ ಮೋದಿಯವರು ಇಸ್ರೋ ಅಧಿಕಾರಿಗಳಿಗೆ ಹೇಳುತ್ತಿರುವ ಕಾರ್ಟೂನ್ ವೈರಲ್ ಆಗಿತ್ತು. ಇದೀಗ ನಂಬಿಯಾರ್ ಅವರು ಮೋದಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Air Marshal PM Modi Raghunath Nambiar Radars


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ