ಚಿತ್ರ ವಿಮರ್ಶೆ: ಪಿಎಂ ನರೇಂದ್ರ ಮೋದಿ

Film Review

27-05-2019

ಚುನಾವಣೆಗೆ ಮೊದಲೇ ಬಿಡುಗಡೆಯಾಗಬೇಕಿದ್ದ ಮೋದಿ ಬಯೋಪಿಕ್ ಪಿಎಂ ನರೇಂದ್ರ ಮೋದಿ ವಿವಾದದ ಹಿನ್ನೆಲೆಯಲ್ಲಿ ಚುನಾವಣೆ ಮುಗಿದ ನಂತರ ಬಿಡುಗಡೆಗೊಂಡಿದೆ. ಚಿತ್ರಕ್ಕೆ ಸಾಧಾರಣ ಪ್ರತಿಕ್ರಿಯೆ ದೊರೆತಿದ್ದು, ವೀಕ್ಷಕರು ಕೇವಲ 2 ಸ್ಟಾರ್ ಗಳನ್ನು ನೀಡಿದ್ದಾರೆ. ವಿವೇಕ್ ಒಬೇರಾಯ್ ನಟನೆಯ ಚಿತ್ರವನ್ನು ಒಮುಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಚಿತ್ರದ ಪ್ಲಸ್ ಪಾಯಿಂಟ್: ಒಳ್ಳೆಯ ಮೇಕಿಂಗ್, ಪರವಾಗಿಲ್ಲ ಎನಿಸುವಂಥ ನಟನೆ ಹಾಗೂ ಕ್ಯಾಮರಾ ವರ್ಕ್

ಮೈನಸ್ ಪಾಯಿಂಟ್: ನರೇಂದ್ರ ಮೋದಿಯವರನ್ನು ಜನರಿಗೆ ಚೆನ್ನಾಗಿ ಗೊತ್ತಿರುವುದರಿಂದ ರೀಲ್ ಮೋದಿಯನ್ನು ಒಪ್ಪಿಕೊಂಡಿಲ್ಲ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಪ್ರಶಾಂತ್ ನಾರಾಯಣ ಸೇರಿದಂತೆ ಹಲವರ ವ್ಯಕ್ತಿತ್ವಕ್ಕೆ ನ್ಯಾಯ ಒದಗಿಸಲಾಗಿಲ್ಲ. ವಿವೇಕ್ ಒಬೆರಾಯ್ ನಟನೆ ಕೂಡ ಮೋದಿಯವರ ನಿಜವಾದ ವ್ಯಕ್ತಿತ್ವದಂತೆ ಚಿತ್ರದಲ್ಲಿ ಕಾಣಿಸಿಲ್ಲ. ಹೀಗಾಗಿ ಮೋದಿ ಚಿತ್ರ ಹಾಕಿರುವ ದುಡ್ಡನ್ನಾದರೂ ಮತ್ತೆ ಗಳಿಸಲು ಹೆಣಗಾಡುವಂತಾಗಿದೆ.


ಸಂಬಂಧಿತ ಟ್ಯಾಗ್ಗಳು

Movie Vivek Oberoi PM Narendra Modi Director


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ