ಬ್ರಿಟನ್ ಗೆ ಪಾಕಿಸ್ತಾನ ಮೂಲದ ಪ್ರಧಾನಿ?

Likely candidates to replace Theresa May as British Prime Minister

27-05-2019

ಐರೋಪ್ಯ ಒಕ್ಕೂಟದಿಂದ ಹೊರಬರುವ ಐತಿಹಾಸಿಕ ಬ್ರೆಕ್ಸಿಟ್ ಒಪ್ಪಂದಕ್ಕೆ ಬ್ರಿಟನ್ ಸಂಸತ್ತಿನಲ್ಲಿ ಅನುಮೋದನೆ ಪಡೆಯಲು ವಿಫಲಗೊಂಡ ಹಿನ್ನೆಲೆಯಲ್ಲಿ ಬ್ರಿಟನ್ ಪ್ರಧಾನಿ ತೆರೆಸಾ ಮೇ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಬ್ರೆಕ್ಸಿಟ್‌ ಕುರಿತು ಸ್ವಪಕ್ಷೀಯರಿಂದ ತೀವ್ರ ಒತ್ತಡದ ಹಿನ್ನೆಲೆಯಲ್ಲಿ ಜೂನ್ 7 ರಂದು ಹುದ್ದೆಯಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ.

ಈ ಮಧ್ಯೆ, ತೆರೆಸಾ ಮೇ ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವುದನ್ನು ಘೋಷಿಸುತ್ತಿದ್ದಂತೆ ಸಾಕಷ್ಟು ಸ್ವಪಕ್ಷೀಯರು ಪ್ರಧಾನಿ ಹುದ್ದೆ ರೇಸ್ ನಲ್ಲಿದ್ದಾರೆ. ಅದರಲ್ಲಿ ಮಾಜಿ ವಿದೇಶಾಂಗ ಸಚಿವ ಬೋರಿಸ್‌ ಜಾನ್ಸನ್‌, ಡೊಮಿನಿಕ್ ರ್ಯಾಬ್, ಮಿಶೆಲ್ ಗೋವ್, ಸಾಜಿದ್ ಜಾವಿದ್ ಸೇರಿದಂತೆ ಹಲವರಿದ್ದಾರೆ. ಆದರೆ ಬ್ರಿಟನ್ ನ ಗೃಹ ಕಾರ್ಯದರ್ಶಿಯಾಗಿರುವ ಪಾಕಿಸ್ತಾನಿ ಮೂಲದ ಸಾಜಿದ್ ಜಾವಿದ್ ಗೆ ಅನೇಕ ಮಂದಿ ಸಂಸದರು ಇವರಿಗೇ ಬೆಂಬಲ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.  

ಒಂದು ವೇಳೆ ಪಾಕ್ ಮೂಲದ ಸಾಜಿದ್ ಜಾವಿದ್ ಅವರೇ ಬ್ರಿಟನ್ ನ ಪ್ರಧಾನಿ ಗದ್ದುಗೆಗೇರುವುದು ಖಚಿತವಾದರೆ, ಭಾರತದಲ್ಲಿ ಹಿಂದೂ ರಾಷ್ಟ್ರೀಯವಾದವನ್ನೇ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದಿರುವ ಎನ್ ಡಿ ಎ ಸರ್ಕಾರಕ್ಕೆ ಸ್ವಲ್ಪ ಮುಜುಗರವಾಗುವ ಸಾಧ್ಯತೆ ಇದೆ.


ಸಂಬಂಧಿತ ಟ್ಯಾಗ್ಗಳು

Theresa May Prime Minister British Sajid Javid


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ