ಹಾವನ್ನು ನುಂಗಿದ ಅಳಿಲು… ಶಾಕ್ ಆದ ಇಂಟರ್ ನೆಟ್ ಲೋಕ!

Viral Pic Of Squirrel Biting Snake Shocks Internet

24-05-2019

ಅಳಿಲು ಪುಟ್ಟ ಜೀವಿ.. ಅಲ್ಲಿಂದಿಲ್ಲಿ, ಮರದಲ್ಲಿ ಓಡಾಡಿಕೊಂಡು ಹಣ್ಣು, ಎಲೆ, ಸೊಪ್ಪುಗಳನ್ನು ತಿಂದುಕೊಂಡಿರುವ ಜೀವಿ. ಆದ್ರೆ ಆ ಪುಟ್ಟ ಅಳಿಲು ಹಾವನ್ನು ನುಂಗೋದಂದ್ರೆ..? ನಂಬೋಕೆ ಸಾಧ್ಯಾನಾ? ಆದರೆ ಈ ಪೋಟೋ ನೋಡಿದ ಮೇಲೆ ನಂಬಲೇ ಬೇಕು.

ಅಮೆರಿಕದ ಗ್ವಾಡಲುಪೆ ಮೌಂಟೇನ್ಸ್ ನ್ಯಾಷನಲ್ ಪಾರ್ಕ್ ನಲ್ಲಿ ಈ ಅಳಿಲು ಹಾವನ್ನು ತಿನ್ನುತ್ತಿರುವ ಪೋಟೋವನ್ನು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವೀಸ್ ಕ್ಲಿಕ್ಕಿಸಿದ್ದು ಇಂಟರ್ ನೆಟ್ ಲೋಕದಲ್ಲಿ ಅಚ್ಚರಿ ಹುಟ್ಟಿಸಿದೆ. ಅಲ್ಲದೇ ಇದು ಪಕ್ಷಿಗಳ ಮೊಟ್ಟೆಗಳನ್ನು, ಹಲ್ಲಿಗಳನ್ನು ಹಾಗೂ ಹಾವುಗಳನ್ನೂ ತಿನ್ನುತ್ತದೆ ಎಂದು ಹೇಳಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ಪೋಸ್ಟ್ ಮಾಡಿದಾಗಿನಿಂದ 7 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆ ದೊರೆತಿದ್ದು, 3 ಸಾವಿರಕ್ಕೂ ಹೆಚ್ಚು ಶೇರ್ ಪಡೆದಿದೆ.


ಸಂಬಂಧಿತ ಟ್ಯಾಗ್ಗಳು

Squirrel Internet Snake USA


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ