ಮೇ 30 ಕ್ಕೆ ಆಂಧ್ರ ಸಿಎಂ ಆಗಿ ಜಗನ್ ಪ್ರಮಾಣ ವಚನ

Jagan Mohan Reddy to take oath As AP CM on may 30

24-05-2019

ಆಂಧ್ರದಲ್ಲಿ ಆಡಳಿತಾರೂಢ ಟಿಡಿಪಿ ಪಕ್ಷವನ್ನು ಧೂಳೀಪಟ ಮಾಡಿ, ವೈಎಸ್ ಆರ್ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಜಯಭೇರಿ ಬಾರಿಸಿದ್ದು, ಇದೇ 30 ರಂದು ಜಗನ್ಮೋಹನ್ ರೆಡ್ಡಿ ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

175 ಸ್ಥಾನಗಳ ಆಂಧ್ರ ವಿಧಾನಸಭೆಯಲ್ಲಿ ವೈಎಸ್ ಆರ್ 150 ಸ್ಥಾನಗಳನ್ನು ಗೆದ್ದಿದ್ದರೆ, ಟಿಡಿಪಿ ಕೇವಲ 24 ಸ್ಥಾನಗಳನ್ನು ಪಡೆದಿತ್ತು. ಇನ್ನು ಇತರೆ 1 ಸ್ಥಾನ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಪೂರ್ಣ ಬಹುಮತದೊಂದಿಗೆ ಮೇ 30 ರಂದು ತಿರುಪತಿಯಲ್ಲಿ ಜಗನ್ ಸಿಎಂ ಆಗಿ ಪ್ರಮಾಣ ಸ್ವೀಕರಿಸಲಿದ್ದಾರೆ. ನಿನ್ನೆಯೇ ರಾಜ್ಯಪಾಲರನ್ನು ಭೇಟಿಯಾಗಿದ್ದ ಚಂದ್ರಬಾಬು ನಾಯ್ಡು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.


ಸಂಬಂಧಿತ ಟ್ಯಾಗ್ಗಳು

Jagan Mohan Reddy YSRC TDP Oath


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ