ಮುಖದ ಕಾಂತಿ ಹೆಚ್ಚಿಸುತ್ತೆ ಕ್ಯಾರೆಟ್

Did You Know? Carrots Can Give You A Beautiful Skin!

23-05-2019

ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಅನೇಕರು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ದಿನದ ಜಂಜಾಟದಲ್ಲಿ ಮುಖ ಕಳಾಹೀನವಾಗುವುದು ಸಾಮಾನ್ಯ. ಆದರೆ ಕಡಿಮೆ ಖರ್ಚಿನಲ್ಲಿ ನಿಮ್ಮ ತ್ವಚೆಯ ಅಂದವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಅನ್ನೋದನ್ನು ನಾವು ಹೇಳುತ್ತೇವೆ.

ಎಲ್ಲರ ಮನೆಯಲ್ಲೂ ಕ್ಯಾರೆಟ್ ಬಳಸುತ್ತಾರೆ. ಆದರೆ ಬರೀ ಸಾಂಬಾರ್ ಗೆ ಮಾತ್ರವಲ್ಲದೇ ಇದು ಮುಖದ ಅಂದಕ್ಕೂ ಸಹಕಾರಿ. ಅದು ಹೇಗೆ ಅನ್ನೋದನ್ನು ನೋಡೋಣ.

ಡ್ರೈಸ್ಕಿನ್ ನವರಿಗಾಗಿ ಫೇಶಿಯಲ್ ಮಾಸ್ಕ್: ಪೊಟ್ಯಾಶಿಯಂ ಹೆಚ್ಚಾಗಿರುವ ಕ್ಯಾರೆಟ್ ಮುಖವನ್ನು ಮಾಯಿಶ್ಚರೈಸ್ ಮಾಡುತ್ತದೆ.

ಆಯ್ಲಿ ಸ್ಕಿನ್ ನವರಿಗಾಗಿ ಫೇಸ್ ಪ್ಯಾಕ್: ಕ್ಯಾರೆಟ್ ನಲ್ಲಿರುವ ವಿಟಾಮಿನ್ ಎ ಮುಖದಲ್ಲಿರುವ ಹೆಚ್ಚಿನ ಜಿಡ್ಡಿನಂಶವನ್ನು ತೆಗೆದುಹಾಕುತ್ತದೆ.

ಕ್ಯಾರೆಟ್ ಪ್ಯಾಕ್ : ಕ್ಯಾರೆಟ್ ಜೊತೆಗೆ ಸಮ ಪ್ರಮಾಣದ ಮೊಟ್ಟೆ ಬಿಳಿ ಭಾಗ ಹಾಗೂ ಮೊಸರನ್ನು ಸೇರಿಸಿ ಹಚ್ಚಿಕೊಂಡರೆ ಮುಖದಲ್ಲಿರುವ ಡೆಡ್ ಸ್ಕಿನ್ ಸೆಲ್ಸ್ ತೆಗೆದು ಫ್ರೆಶ್ ಸ್ಕಿನ್ ನೀಡುತ್ತದೆ.

ಕ್ಯಾರೆಟ್ ಜ್ಯೂಸ್ ಜೊತೆಗೆ ಅಲೋವೆರಾ ಹಚ್ಚಿಕೊಂಡಲ್ಲಿ ಅದು ವಯಸ್ಸಾಗುತ್ತಿದ್ದಂತೆ ಮುಖ ಸುಕ್ಕಾಗುವುದನ್ನು ತಡೆಯುತ್ತದೆ.


ಸಂಬಂಧಿತ ಟ್ಯಾಗ್ಗಳು

Carrot Treatment Skin Beauty


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ