ಬಿಸಿಲ ಬೇಗೆಗೆ ಬೇಸತ್ತು ಕಾರ್ ಗೆ ಸಗಣಿ ಹಚ್ಚಿದ..!

Ahmedabad Driver Coats Car With Cow Dung To Cool It As Temperatures Soar

22-05-2019

ಬೇಸಿಗೆ ಬಿಸಿಲ ಝಳಕ್ಕೆ ಜನರು ಕಂಗಾಲಾಗಿದ್ದಾರೆ. ಮನೆಯಲ್ಲೇ ಕುಳಿತುಕೊಳ್ಳಲಾಗದ ಸ್ಥಿತಿ ಇರುವಾಗ ವಾಹನದಲ್ಲಿ ಆಚೆ ಹೋಗುವವರು ಪಾಡು ಹೇಳತೀರದು. ಈ ಮಧ್ಯೆ ಇಲ್ಲೊಬ್ಬ ವ್ಯಕ್ತಿ ತನ್ನ ಕಾರ್ ತಂಪಾಗಿಸಲು ಹೊಸದೊಂದು ಉಪಾಯ ಕಂಡುಹಿಡಿದಿದ್ದಾರೆ. ಅದೇ ಸಗಣಿ.

ಸಗಣಿಯನ್ನು ನಮ್ಮಲ್ಲಿ ಗೋಡೆಗಳಿಗೆ ಹಚ್ಚುತ್ತಾರೆ. ನೆಲಕ್ಕೂ ಬಳಸುತ್ತಾರೆ. ಇದು ಬೇಸಿಗೆಯಲ್ಲಿ ತಂಪಾಗಿಸುತ್ತೆ ಜೊತೆಗೆ ಚಳಿಗಾಲದಲ್ಲಿ ಉಷ್ಣವಾಗಿಸುತ್ತೆ. ಇದನ್ನೇ ವ್ಯಕ್ತಿಯೊಬ್ಬ ತನ್ನ ಕಾರ್ ಗೆ ಹಚ್ಚಿಸಿಕೊಂಡಿದ್ದಾನೆ.   

ಹೌದು ಅಹಮದಾಬಾದ್ ನಲ್ಲಿ ಉಷ್ಣಾಂಶ 45ಡಿಗ್ರಿ ಇದೆ. ಸೆಖೆಯಿಂದ ಬೇಸತ್ತ ರೂಪೇಶ್ ಗೌರಂಗ್ ದಾಸ್ ಎನ್ನುವವರು ಸಗಣಿಯನ್ನು ತನ್ನ ಕಾರ್ ಗೆ ಹಚ್ಚಿಸಿಕೊಂಡು ಅದನ್ನು ಫೇಸ್ ಬುಕ್ ನಲ್ಲಿ ಪೋಟೋಗಳನ್ನು ಹಾಕಿಕೊಂಡಿದ್ದಾರೆ. ಇದೊಂದು ನೈಸರ್ಗಿಕವಾಗಿ ತಂಪಾಗಿಸುವ ವಿಧಾನ. ಸಗಣಿ ಬಳಿದ ನಂತರ ತಾನು ಆರಾಮಾಗಿ ಕಾರ್ ಡ್ರೈವ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ahmedabad Temperature Summer Cow


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ