ಖಾತೆಗಳನ್ನು ಮಾರಿಕೊಳ್ಳಲಾಗಿದೆ: ಶಾಸಕ ರೋಷನ್ ಬೇಗ್ ಆರೋಪ

Roshan Baig reaction about exit poll

22-05-2019

ಕಾಂಗ್ರೆಸ್ ಜೆಡಿಎಸ್‍ಗೆ ಖಾತೆಗಳನ್ನು ಮಾರಿಕೊಂಡಿದೆ. ಇದರಲ್ಲಿ ಕುಮಾರಸ್ವಾಮಿಯವರ ವಿರುದ್ಧ ದೂರುವುದೇನಿದೆ? ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಆರೋಪಿಸಿದ್ದಾರೆ. ಅಲ್ಲದೇ, ಮೊದಲ ದಿನದಿಂದಲೇ ಸಿದ್ದರಾಮಯ್ಯನವರು ನಾನು ಸಿಎಂ ಆಗುತ್ತೇನೆ ಎನ್ನುತ್ತಿದ್ದರು. ಸರ್ಕಾರ ರಚಿಸಲು ನೀವು ಅವರ ಮನೆಬಾಗಿಲಿಗೆ ಹೋದಿರಿ. ಆದರೆ, ಕುಮಾರಸ್ವಾಮಿಯವರಿಗೆ ಕೆಲಸ ಮಾಡಲು ಬಿಡುತ್ತಿಲ್ಲ ಎಂದರು.

ಖಾಸಗಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣರೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಕೆ ಸಿ ವೇಣುಗೋಪಾಲ್ ಒಬ್ಬ ವಿದೂಷಕ. ನಮ್ಮ ನಾಯಕ ರಾಹುಲ್ ಗಾಂಧಿ ಕುರಿತು ನನಗೆ ನೋವಿದೆ. ವೇಣುಗೋಪಾಲ್‍ರಂಥ ವಿದೂಷಕ, ಸಿದ್ದರಾಮಯ್ಯನವರಂಥ ಅಹಂಕಾರದ ವ್ಯಕ್ತಿ ಮತ್ತು ಗುಂಡೂರಾವ್ ಅವರ ವೈಫಲ್ಯವೇ ರಾಜ್ಯದ ಫಲಿತಾಂಶಕ್ಕೆ ಕಾರಣ ಎಂದರು.

ಅಲ್ಲದೇ, ಕಾಂಗ್ರೆಸ್ ಪಕ್ಷ ಕ್ರಿಶ್ಚಿಯನ್ನರಿಗೆ ಒಂದೇ ಒಂದು ಕ್ಷೇತ್ರವನ್ನು ಕೊಡಲಿಲ್ಲ. ಮುಸ್ಲಿಮರಿಗೆ ಕೇವಲ ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡಿದೆ. ಅವರನ್ನು ಕಡೆಗಣಿಸಲಾಗಿದೆ. ನಮ್ಮನ್ನು ಬಳಸಿಕೊಳ್ಳಲಾಗಿದೆ. ಇದರಿಂದ ನನಗೆ ಅಸಮಧಾನವಾಗಿದೆ ಎಂದು ಅವರು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Roshan Baig Karnataka Congress JDS


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ