ಯುಪಿಯಲ್ಲಿ ಮಹಾಮೈತ್ರಿಕೂಟ 60ಕ್ಕೂ ಸ್ಥಾನ ಗೆಲ್ಲಲಿದೆ: ಸಂಜಯ್ ಸಿಂಗ್

SP-BSP to win 60 seats in Uttar Pradesh: Sanjay Singh

21-05-2019

ಮಹಾಮೈತ್ರಿಕೂಟ ಉತ್ತರಪ್ರದೇಶದಲ್ಲಿ 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಆಪ್ ನಾಯಕ ಸಂಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದ ನಂತರ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಇಡೀ ದೇಶಾದ್ಯಂತ ಅಳಿಸಿಹೋಗಲಿದೆ. ಮತಗಟ್ಟೆ ಸಮೀಕ್ಷೆಗಳು ಈ ಹಿಂದಿನಂತೆಯೇ ಸಂಪೂರ್ಣ ಸುಳ್ಳು ಎಂಬ ಸಂಗತಿ ಸಾಬೀತಾಗಲಿದೆ. ವಿಪಕ್ಷಗಳು ಕೇಂದ್ರದಲ್ಲಿ ಸರ್ಕಾರ ರಚಿಸಲಿವೆ ಎಂದರು.

ಜೊತೆಗೆ, ಇಂದಿನ ಭೇಟಿ ಕುರಿತು ಪ್ರತಿಕ್ರಿಯಿಸಿದ ಅವರು, ನಾಳೆ ಫಲಿತಾಂಶ ಪ್ರಕಟವಾಗಲಿದೆ. ನಂತರದ ಕಾರ್ಯತಂತ್ರದ ಕುರಿತು ಚರ್ಚೆ ನಡೆಯಿತು. ಬಿಜೆಪಿಯ ಜೋಡಿಗಳಾದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಹಾಗೂ ಕೋಮುವಾದಿ ಶಕ್ತಿಗಳನ್ನು ದೂರವಿಡುವುದೇ ನಮ್ಮ ಮೊದಲ ಆದ್ಯತೆ. ಇದು ಒಂದು ಸೌಹಾರ್ಧ ಭೇಟಿ ಎಂದರು.


ಸಂಬಂಧಿತ ಟ್ಯಾಗ್ಗಳು

Sanjay Singh BSP SP Uttar Pradesh


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ