ಗಾಳಿಸುದ್ದಿಯಿಂದ ಧೈರ್ಯಗೆಡದಿರಿ : ಕೈ ಕಾರ್ಯಕರ್ತರಿಗೆ ಪ್ರಿಯಾಂಕಾ ಕರೆ

"Exit Polls Just To Discourage You": Priyanka Gandhi To Congress Workers

21-05-2019

ದೇಶದಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಪೂರ್ಣ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುವುದು ಖಚಿತ. ಇದು ಪ್ರತಿಪಕ್ಷ ಕಾಂಗ್ರೆಸ್ ನಿದ್ದೆಗೆಡಿಸಿದ್ದರೂ ಪಕ್ಷ ತನ್ನ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೈ ಕಾರ್ಯಕರ್ತರಿಗೆ ಆಡಿಯೊ ಟೇಪ್ ಬಿಡುಗಡೆ ಮಾಡಿದ್ದು, ಚುನಾವಣೋತ್ತರ ಸಮೀಕ್ಷೆಯಿಂದ ಯಾರೂ ಧೈರ್ಯಕಳೆದುಕೊಳ್ಳಬೇಕಿಲ್ಲ ಎಂದಿದ್ದಾರೆ. ಇದು ಕೇವಲ ಗಾಳಿಸುದ್ದಿಯಷ್ಟೇ. ನೀವು ನಿಮ್ಮ ಪ್ರಯತ್ನ ನಿಲ್ಲಿಸಬೇಡಿ. ಎಲ್ಲಾ ಸ್ಟ್ರಾಂಗ್ ರೂಂ ಹಾಗೂ ಮತ ಎಣಿಕೆ ಕೇಂದ್ರದ ಬಳಿ ಎಚ್ಚರಿಕೆಯಿಂದ ಕಾವಲಿರಿ ಎಂದು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Priyanka Gandhi Exit Poll Congress Lok Sabha election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ