ಮಕ್ಕಳಲ್ಲಿ ಒಬೆಸಿಟಿ ಬರದಂತೆ ತಡೆಯಲು ಹೀಗೆ ಮಾಡಿ

Walking, Cycling Reduce Obesity Risk In Kids

21-05-2019

ಇತ್ತೀಚಿನ ದಿನಗಳಲ್ಲಿ ಒಬೆಸಿಟಿ ಅಥವಾ ಸ್ಥೂಲಕಾಯ ಅನ್ನೋದು ಸಾಮಾನ್ಯವಾಗಿಬಿಟ್ಟಿದೆ. ಬರೀ ದೊಡ್ಡವರಲ್ಲಿ ಮಾತ್ರವಲ್ಲ ಬದಲಾಗಿ ಚಿಕ್ಕ ಮಕ್ಕಳಲ್ಲೂ ಸ್ಥೂಲಕಾಯ ಕಂಡುಬರುತ್ತಿದೆ. ಅದಕ್ಕೆ ಕಾರಣ ಇಂದಿನ ಜೀವನಪದ್ಧತಿ. ಆದರೆ ಮಕ್ಕಳು ಸೈಕ್ಲಿಂಗ್, ವಾಕಿಂಗ್ ಮಾಡಿದಲ್ಲಿ ಒಬೆಸಿಟಿಯಿಂದ ದೂರವಿರಬಹುದು ಎನ್ನುತ್ತದೆ ಅಧ್ಯಯನ.

ಲಂಡನ್ ನ ಬಿಎಂಸಿ ಪಬ್ಲಿಕ್ ಹೆಲ್ತ್ ಜರ್ನಲ್ ನಲ್ಲಿ ಈ ಕುರಿತ ಅಧ್ಯಯನ ವರದಿ ಪ್ರಕಟವಾಗಿದ್ದು, ಸುಮಾರು 2 ಸಾವಿರ ಪ್ರಾಥಮಿಕ ಶಾಲಾ ಮಕ್ಕಳನ್ನು ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಮಕ್ಕಳು, ವಾಕಿಂಗ್, ಸೈಕ್ಲಿಂಗ್ ಮಾಡುವ ಮಕ್ಕಳು ಒಬೆಸಿಟಿಯಿಂದ ದೂರವಿರುತ್ತಾರೆ ಎಂದು ತಿಳಿಸಿದ್ದಾರೆ.

ಹೀಗಾಗಿ ಹತ್ತಿರವಿರುವ ಶಾಲೆಗಳಿಗೆ ಮಕ್ಕಳನ್ನು ನಡೆದುಕೊಂಡೇ ಬಿಟ್ಟುಬರುವುದು ಅಥವಾ ಮಕ್ಕಳಿಗೆ ಸೈಕಲ್ ನಲ್ಲಿ ಹೋಗಿ ಎನ್ನುವುದು ಜೊತೆಗೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅದರಲ್ಲೂ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು ಒಳ್ಳೆಯದು. ಇದರಿಂದ ಚಿಕ್ಕಂದಿನಲ್ಲಿ ಸ್ಥೂಲಕಾಯದ ಸಮಸ್ಯೆ ಉಂಟಾಗುವುದಿಲ್ಲ ಎಂದು ಆರೋಗ್ಯ ತಜ್ಷರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Walking Obesity Cycling Kids


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ