ರಾತ್ರಿ ವೇಳೆ ಮೊಬೈಲ್ ಬಳಸಿದರೆ ನಿದ್ರಾಹೀನತೆ ಪಕ್ಕಾ..!

Phone Use Limit Can Reverse Sleep Problems in a Week

21-05-2019

ಅತಿಯಾದ ಮೊಬೈಲ್ ಬಳಸುವುದು ಆರೋಗ್ಯಕ್ಕೆ ಹಾನಿಕರ. ಆದರಲ್ಲೂ ರಾತ್ರಿ ವೇಳೆ ಮೊಬೈಲ್ ಬಳಕೆ ನಿದ್ದೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.

ಅದರಲ್ಲೂ ವಿದ್ಯಾರ್ಥಿಗಳು, ಹದಿಹರೆಯದವರು ರಾತ್ರಿ ವೇಳೆ ಮೊಬೈಲ್, ಕಂಪ್ಯೂಟರ್ ಬಳಸುವುದರಿಂದ ನಿದ್ರಾಹೀನತೆ, ಏಕಾಗ್ರತೆಯ ಕೊರತೆ, ಮನಸ್ಸು ಉಲ್ಲಾಸಭರಿತವಾಗಿಲ್ಲದಿರುವುದು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

ದಿನದಲ್ಲಿ 4 ಗಂಟೆಗಳ ಕಾಲ ಸ್ಕ್ರೀನ್ ನೋಡೋದ್ರಿಂದ ಸುಮಾರು ಅರ್ಧ ಗಂಟೆ ನಿದ್ರೆ ತಡೆದು ಬರುತ್ತದೆ. ಯಾರು ಇನ್ನು ಹೆಚ್ಚು ಸಮಯವನ್ನು ಮೊಬೈಲ್ ನೊಂದಿಗೆ ಕಳೆಯುತ್ತಾರೋ ಅಂಥವರಿಗೆ ಇನ್ನೂ ಹೆಚ್ಚಿನ ನಿದ್ರೆಯ ಸಮಸ್ಯೆ ಬರುತ್ತದೆ ಎಂದು ನೆದರ್ ಲ್ಯಾಂಡ್ ಎಮರ್ಸ್ಡಾಮ್ ಯುಎಂಸಿ ಆಸ್ಪತ್ರೆಯ ವೈದ್ಯ ಡಿರ್ಕ್ ಜನ್ ಸ್ಟೆವರ್ಸ್ ಹೇಳಿದ್ದಾರೆ.

ಅಲ್ಲದೇ, ರಾತ್ರಿ ವೇಳೆಯ ಮೊಬೈಲ್ ಬಳಕೆ ದೇಹದಲ್ಲಿರುವ ಜೈವಿಕ ಗಡಿಯಾರದ ಮೇಲೆ ಪ್ರಭಾವ ಬೀರುವುದಲ್ಲದೇ ನಿದ್ರೆಯ ಹಾರ್ಮೋನ್ ಉತ್ಪಾದನೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜೊತೆಗೆ ಸರಿಯಾಗಿ ನಿದ್ದೆ ಬರದಿರುವುದು, ಪದೇ ಪದೇ ಎಚ್ಚರವಾಗುವ ಸಮಸ್ಯೆಗಳು ಉಂಟಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Sleep Mobile Health Study


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ