ಕ್ಯಾನ್ಸ್ ನಲ್ಲಿ ದೀಪಿಕಾ ಮಿಂಚು

Cannes - 2019

18-05-2019

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಕ್ಯಾನ್ಸ್ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ದೀಪಿಕಾ ಪಡುಕೋಣೆ 2 ನೇ ದಿನವೂ ಮಿಂಚಿದ್ದಾರೆ. ತಿಳಿ ಹಸಿರು ಬಣ್ಣದ ಗೌನ್ ನಲ್ಲಿ ಥೇಟ್ ಗೊಂಬೆಯ ಹಾಗೆ ಕಣ್ಮನ ಸೆಳೆದರು. ಗೌನ್ ಜೊತೆಗೆ ಬ್ರೌನ್ ಬಣ್ಣದ ಬೌ ಹಾಕಿದ್ದೂ ಕೂಡ ವಿಶೇಷವಾಗಿತ್ತು. ಪ್ರಸಿದ್ಧ ವಸ್ತ್ರವಿನ್ಯಾಸಕ ಪೀಟರ್ ದನ್ ದಾಸ್ ಇದನ್ನು ವಿನ್ಯಾಸಗೊಳಿಸಿದ್ದಾರೆ.

ಈ ಮೊದಲು ಹೀನಾ ಖಾನ್, ಪ್ರಿಯಾಂಕಾ ಚೋಪ್ರಾ ಮೊದಲ ಬಾರಿಗೆ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ದೀಪಿಕಾ ಪಡುಕೋಣೆ ಮೊನ್ನೆ ಕಪ್ಪು ಮತ್ತು ಬಿಳಿ ಗೌನ್ ನಲ್ಲಿ ಮಿಂಚಿದ್ದರು. ಜೊತೆಗೆ ನಿನ್ನೆಯಂತೂ ಅವರ ವಸ್ತ್ರ ವಿನ್ಯಾಸ ಹಾಗೂ ಸೌಂದರ್ಯ ಎರಡಕ್ಕೂ ಸಿಕ್ಕಾಪಟ್ಟೆ ಪ್ರಶಂಸೆ ಸಿಕ್ಕಿದ್ದು ಸುಳ್ಳಲ್ಲ.


ಸಂಬಂಧಿತ ಟ್ಯಾಗ್ಗಳು

Deepika Padukone France Cannes 2019 Film Festival


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ