ಕತ್ರಿನಾ ಒಕೆ, ಪ್ರಿಯಾಂಕಾ ಗೆ ಸಲ್ಲು ಥ್ಯಾಂಕ್ಸ್ ಹೇಳಿದ್ಯಾಕೆ..?

Bharat: Salman thanks to priyanka for leaving

18-05-2019

ಬರುವ ಈದ್ ಹಬ್ಬದಲ್ಲಿ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ಭಾರತ್ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ನಟಿಸಬೇಕಿತ್ತು. ಆದರೆ ಕಾರಣಾಂತರದಿಂದ ಪಿಸಿ ಅದರಿಂದ ಹಿಂದೆ ಸರಿದಿದ್ದರು. ಆ ಪಾತ್ರಕ್ಕೆ ನಟಿ ಕತ್ರಿನಾ ಕೈಫ್ ಜೀವ ತುಂಬಿದ್ದಾರೆ. ಇನ್ನು ಚಿತ್ರದ ಒಂದು ಹಾಡಿನಲ್ಲಿ ಕತ್ರಿನಾ ಸಾಂಪ್ರದಾಯಿಕವಾಗಿ ಸೀರೆಯುಟ್ಟು ಫುಲ್ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ.

ಈ ಮಧ್ಯೆ ಚಿತ್ರದ ಮತ್ತೊಂದು ಹಾಡಿನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸಲ್ಮಾನ್  ತಮಾಷೆಯಾಗಿ ಪ್ರಿಯಾಂಕಾ ಚೋಪ್ರಾಗೆ ಧನ್ಯವಾದ ಅರ್ಪಿಸಿದರು.ಅಲಿ ಅಬ್ಬಾಸ್ ಜಫರ್ ನಿರ್ದೇಶನದ ಭಾರತ್ ದಲ್ಲಿ ಸಲ್ಲುಭಾಯ್ ಐದು ವಿವಿಧ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bharat Priyanka Chopra Salman Khan Katrina kaif


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ