ಇಂಟರ್ ನೆಟ್ ಸ್ಟಾರ್ ‘ಕ್ಯಾಟ್’ ಇನ್ನು ನೆನಪು ಮಾತ್ರ

Internet Star Grumpy Cat Dies

18-05-2019

ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೆಬ್ಬಿಸಿದ್ದ, ಇಂಟರ್ ನೆಟ್ ಸ್ಟಾರ್ ಎಂದೇ ಕರೆಯಲಾಗುವ ಗ್ರಂಪಿ ಕ್ಯಾಟ್ ಸಾವನ್ನಪ್ಪಿದೆ. ಈ ಕ್ಯೂಟ್ ಕ್ಯಾಟ್ ಗೆ 7 ವರ್ಷವಾಗಿತ್ತು. ಈ ಬೆಕ್ಕಿನ ಮಾಲಿಕರು ಈ ವಿಷಯ ತಿಳಿಸಿದ್ದು, ಈ ಸುದ್ದಿ ನೀಡಲು ತಮಗೆ ಅತೀವ ದುಃಖವಾಗುತ್ತಿದೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಮುದ್ದಾದ ಕಣ್ಣು ಜೊತೆಗೆ ಕೋಪಗೊಂಡಿರುವಂಥ ಮುಖ ಹೊಂದಿರುವ ಈ ಮುಂಗೋಪಿ ಬೆಕ್ಕು ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗಿತ್ತು. ಕೋಟಿಗಟ್ಟಲೆ ಅಭಿಮಾನಿಗಳನ್ನು ಹೊಂದಿರುವ ಈ ಕ್ಯಾಟ್ ಗೆ ಹಾಲಿವುಡ್ ಸೆಲೆಬ್ರಿಟಿಸ್ ಕೂಡ ಫ್ಯಾನ್ ಆಗಿದ್ದರು.

ಇನ್ನು ಬೆಕ್ಕು ಸಾವನ್ನಪ್ಪಿರೋದಕ್ಕೆ ನೂರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಗ್ರಂಪಿ ಕ್ಯಾಟ್ ಗೆ ಫೇಸ್ ಬುಕ್ ನಲ್ಲಿ 8.5 ಮಿಲಿಯನ್, ಇನ್ಸ್ಟಾಗ್ರಾಂ ನಲ್ಲಿ 2.5 ಮಿಲಿಯನ್ ಹಾಗೂ ಟ್ವಿಟ್ಟರ್ ನಲ್ಲಿ 1.5 ಮಿಲಿಯನ್ ಫಾಲೋವರ್ಸ್ ಇದ್ದಾರೆ.


ಸಂಬಂಧಿತ ಟ್ಯಾಗ್ಗಳು

Internet Star Grumpy Cat Social Media Followers


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ