ಸಂಬಂಧಿಕರ ಮನೆಗೆ ಹೋಗಲು ಹಣ ಕೊಡದಿದ್ದರಿಂದ ನೇಣಿಗೆ ಶರಣು !

Kannada News

08-06-2017

ಬೆಂಗಳೂರು:- ಸಂಬಂಧಿಕರ ಮನೆಗೆ ಹೋಗಲು ಪತ್ನಿ ಹಣ ಕೊಡದಿದ್ದರಿಂದ ನೊಂದ ಪೇಂಟರ್ ನೇಣಿಗೆ ಶರಣಾಗಿರುವ ದುರ್ಘಟನೆ ಹೊರಮಾವುವಿನ ರಾಜಣ್ಣ ಲೇಔಟ್‍ನಲ್ಲಿ ನಡೆದಿದೆ. ರಾಜಣ್ಣ ಲೇಔಟ್‍ನ ಮೂರನೇ ಕ್ರಾಸ್‍ನ ಮುತ್ತು(40)ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ, ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಈತ ಹಣವನ್ನು ಪತ್ನಿಗೆ ತಂದುಕೊಡುತ್ತಿದ್ದ. ತಮಿಳುನಾಡಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಲು ಹಣ ಕೇಳಿದ್ದಾರೆ. ಹಣ ಕೊಡಲು ಪತ್ನಿ ನಿರಾಕರಿಸಿದ್ದರಿಂದ ನೊಂದ ಮುತ್ತು ಮನೆಯಲ್ಲಿ ರಾತ್ರಿ 9.30ರ ವೇಳೆ ಎಲ್ಲರೂ ಮಲಗಿದ್ದಾಗ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಪ್ರಕರಣ ದಾಖಲಿಸಿಕೊಂಡ ಹೆಣ್ಣೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ