ರಜಿನಿಕಾಂತ್ ಅವರಂತೆ ದೊಡ್ಡ ನಟನಾಗಬೇಕು: ಸನ್ನಿ ಪವಾರ್

I want to be a big actor like Rajanikanth: Sunny Pawar

16-05-2019

ಮುಂಬೈ: ಮುಂಬೈನ ಕಲೀನಾ ಬಳಿಯ ಕುಂಚಿ ಕರ್ವೆ ನಗರದ ಕೊಳಚೆ ಪ್ರದೇಶದ ನಿವಾಸಿ 11 ವರ್ಷದ ಬಾಲಕ ಸನ್ನಿ ಪವಾರ್, 19ನೇ ನ್ಯೂಯಾರ್ಕ್ ಭಾರತೀಯ ಫಿಲ್ಮ್ ಫೆಸ್ಟಿವಲ್ - 2019ರಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದಿದ್ದಾನೆ. ಚಿಪ್ಪಾ ಚಿತ್ರದ ನಟನೆಗೆ ಸನ್ನಿ ಪವಾರ್ ಪ್ರಶಸ್ತಿಗೆ ಭಾಜನನಾಗಿದ್ದಾನೆ. 2016ರಲ್ಲಿ ಆಸ್ಟ್ರೇಲಿಯಾ ನಿರ್ದೇಶಕ ಗಾರ್ತ್ ಡೇವಿಸ್ ಅವರ ಲಯನ್ ಚಿತ್ರದಲ್ಲಿ ಕೂಡ ಈ ಬಾಲಕ ಅಭಿನಯಿಸಿದ್ದ.

ಪ್ರಶಸ್ತಿ ಬಂದ ಖುಷಿಯ ಸಮಯದಲ್ಲಿ ಪ್ರತಿಕ್ರಿಯಿಸಿದ ಸನ್ನಿ ಪವಾರ್, ನನಗೆ ತುಂಬಾ ಸಂತೋಷವಾಗಿದೆ. ನನ್ನ ಸಾಧನೆಗೆ ನನ್ನ ಪೋಷಕರೇ ಕಾರಣ. ನಾನು ರಜಿನಿಕಾಂತ್ ಅವರಂತೆ ದೊಡ್ಡ ನಟನಾಗಬೇಕು ಮತ್ತು ನನ್ನ ಪೋಷಕರು ಹೆಮ್ಮೆಪಡುವಂತಾಗಬೇಕು. ಬಾಲಿವುಡ್ ಮತ್ತು ಹಾಲಿವುಡ್‍ ಎರಡೂ ಚಿತ್ರರಂಗದಲ್ಲೂ ನಾನು ಕೆಲಸ ಮಾಡಬೇಕು ಎಂದಿದ್ದಾನೆ.


ಸಂಬಂಧಿತ ಟ್ಯಾಗ್ಗಳು

Rajanikanth Child Actor Sunny Pawar New York


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ