ರಮೇಶ್ ದನಿಯ ಬಗ್ಗೆಯೇ ವೀಕ್ಷಕರ ತಕರಾರು..!

Viewers not happy with Ramesh’s Voice..!

15-05-2019

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕನ್ನಡದ ಜನಪ್ರಿಯ ಶೋ. ವಾರಾಂತ್ಯದಲ್ಲಿ, ಸಾಧಕರನ್ನು ಪರಿಚಯಯಿಸಿ, ಮಾತನಾಡಿಸಿ ಅವರ ಅನುಭವಗಳನ್ನು ವೀಕ್ಷಕರೆದುರು ತೆರೆದಿಡುವ ಕಾರ್ಯಕ್ರಮ. ಕನ್ನಡದಲ್ಲಿ ಸಾಧನೆ ಮಾಡಿದ ಸಾಕಷ್ಟು ಕಲಾವಿದರನ್ನು, ನಟ- ನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಹೆಸರಲ್ಲೇ ಇರುವ ಹಾಗೆ ಆರಂಭದಿಂದಲೂ ನಟ ರಮೇಶ್ ಅರವಿಂದ್ ಅದನ್ನು ನಡೆಸಿಕೊಡುತ್ತಿದ್ದಾರೆ. ಆದರೆ ರಮೇಶ್ ನಡೆಸಿಕೊಡುವ ರೀತಿಯ ಬಗ್ಗೆ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಅವರು ಅತಿಥಿಗಳಿಗೆ ಕೇಳುವ ಪ್ರಶ್ನೆಗಳಲ್ಲಿ ಸರಿಯಾದ ಸ್ಪಷ್ಟತೆಯಿಲ್ಲ. ಮಾತಿನಲ್ಲಿ, ಧ್ವನಿಯಲ್ಲಿ ಸ್ಪಷ್ಟತೆ ಇಲ್ಲ ಅನ್ನೋದು ಅನೇಕ ವೀಕ್ಷಕರ ಅಭಿಪ್ರಾಯವಾಗಿದೆ. ಇದೊಂದು ಅಂಶ ಸರಿಯಾದಲ್ಲಿ ಈ ಕಾರ್ಯಕ್ರಮ ವೀಕ್ಷಕರ ಅಚ್ಚುಮೆಚ್ಚು ಎನ್ನುವುದರಲ್ಲಿ ಸಂಶಯವೇ ಇಲ್ಲ.


ಸಂಬಂಧಿತ ಟ್ಯಾಗ್ಗಳು

Ramesh Aravind Programme Zee Kannada View


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ