ನೌಹೀರಾ ಶೇಖ್ 7 ದಿನಗಳ ಕಾಲ ಇಡಿ ವಶಕ್ಕೆ

ED officials took Nowhera sheikh into 7 days custody

15-05-2019

ಹೈದರಾಬಾದ್: ವಜ್ರ ಮತ್ತು ಆಭರಣಗಳ ಉದ್ಯಮಿ ಹಾಗೂ ರಾಜಕಾರಣಿ ನೌಹೀರಾ ಶೇಖ್, ಮೊಲ್ಲಿ ಥಾಮಸ್, ಬಿಜು ಥಾಮಸ್ ಅವರನ್ನು 7 ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ಹೈದರಾಬಾದ್‍ನ ಮೆಟ್ರೊಪಾಲಿಟನ್ ಸೆಷನ್ಸ್ ಕೋರ್ಟ್ ಒಪ್ಪಿಸಿದೆ. ಹೈದಾರಾಬಾದ್‍ನ ಹೀರಾ ಗ್ರೂಪ್ನ ಮೋಸದ ಹಣ ಚಲಾವಣೆ ಯೋಜನೆಯ ಆರೋಪ ಕೇಳಿಬಂದಿತ್ತು. ಈ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿತ್ತು. ಕಳೆದ ಕೆಲ ದಿನಗಳ ಹಿಂದೆ ಏಕಕಾಲಕ್ಕೆ ಹೈದರಾಬಾದ್‍ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಅಂದಹಾಗೆ ಈ ನೌಹೀರಾ ಶೇಖ್ ಕರ್ನಾಟಕದಲ್ಲೂ ಚಿರಪರಿಚಿತರಾಗಿದ್ದರು. 2018ರ ರಾಜ್ಯ ವಿಧಾನಸಭೆ ಚುನಾವಣೆ ವೇಳೆ ನೂತನವಾಗಿ ಎಂಇಪಿ ಸ್ಥಾಪಿಸಿದ್ದರು. ಜೊತೆಗೆ, ಸ್ವರಾಜ್ ನ್ಯೂಸ್ ಎಂಬ ಸುದ್ದಿ ವಾಹಿನಿಯನ್ನು ಕೂಡ ಆರಂಭಿಸಿದ್ದರು. ವಿಧಾನಸಭೆ ಚುನಾವಣೆಯ ನಂತರ ಈ ಸುದ್ದಿ ವಾಹಿನಿ ಸ್ಥಗಿತಗೊಂಡಿತ್ತು.


ಸಂಬಂಧಿತ ಟ್ಯಾಗ್ಗಳು

ED Custody Nowhera sheikh Politician


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ