ಉ.ಪ್ರ ಟ್ರಾಫಿಕ್ ಪೊಲೀಸರಿಗೆ ಬೆಂಗಳೂರು ಟೋಪಿ

Lacknow traffic police get Bengaluru counterparts caps on trial basis

15-05-2019

ಉತ್ತರ ಪ್ರದೇಶದಲ್ಲಿ ತೀವ್ರ ಬಿಸಿಲಿನಿಂದಾಗಿ ಅಲ್ಲಿನ ಜನ ಮಾತ್ರವಲ್ಲದೇ ಟ್ರಾಫಿಕ್ ಪೊಲೀಸರು ಕೂಡ ಹೈರಾಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಧರಿಸುವಂಥ ಟೋಪಿಗಳನ್ನು ತರಿಸಿಕೊಳ್ಳುವ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಲಖ್ನೊ ಸಂಚಾರ ವಿಭಾಗದ ಎಸ್ ಪಿ ಹೇಳಿದ್ದಾರೆ.

ಕರ್ನಾಟಕದ ಟ್ರಾಫಿಕ್ ಪೊಲೀಸರು ಧರಿಸುವ ಟೋಪಿಗಳಿಂದ ಸೂರ್ಯನ ಕಿರಣಗಳಿಂದ ರಕ್ಷಣೆ ಸಿಗುತ್ತಿದೆ. ಮತ್ತು ಈ ಟೋಪಿಗಳಲ್ಲಿ ಗಾಳಿ ಸಂಚಾರಕ್ಕೂ ಅವಕಾಶ ಇರುತ್ತದೆ. ಆರಂಭದಲ್ಲಿ ಬೆಂಗಳೂರಿನಿಂದ 50 ಟೋಪಿಗಳಿಗೆ ಆರ್ಡರ್ ಮಾಡಿದ್ದೇವೆ. ಈ ಕುರಿತು ವಿವರವಾದ ವರದಿಯನ್ನು ಸಿದ್ಧಗೊಳಿಸಲಾಗುತ್ತದೆ. ಈ ಕುರಿತು ಸಮಿತಿಯೊಂದನ್ನೂ ರಚಿಸಲಾಗಿದ್ದು, ಸಮವಸ್ತ್ರದೊಂದಿಗೆ ಬೆಂಗಳೂರಿನ ಟೋಪಿಯನ್ನೂ ಒಳಗೊಳ್ಳುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Uttara Pradesh Cat Traffic Police Summer


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ