ಮೋದಿ, ಬಿಜೆಪಿ ಪರಂಪರೆಯಲ್ಲಿ ಕೋಮುವಾದದ ನೆರಳು: ಮಾಯಾವತಿ

War of words between Maya and Modi

15-05-2019

ಲಖ್ನೋ: ಪ್ರಧಾನಿ ನರೇಂದ್ರ ಮೋದಿಯವರು ನಾನು ಉತ್ತರಪ್ರದೇಶದ ಸಿಎಂ ಆಗಿದ್ದಕ್ಕಿಂತ ದೀರ್ಘಕಾಲ ಗುಜರಾತ್‍ನ ಸಿಎಂ ಆಗಿದ್ದರು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹೇಳಿದರು. ಆದರೆ, ದೇಶದಲ್ಲಿ ಅವರ ಮತ್ತು ಬಿಜೆಪಿ ಪರಂಪರೆ ಕೋಮುವಾದದ ಕರಾಳತೆಯಿಂದ ಕೂಡಿದೆ. ನನ್ನ ಸರ್ಕಾರದ ಅವಧಿಯಲ್ಲಿ ಉತ್ತರಪ್ರದೇಶ ದಂಗೆ ಮತ್ತು ಅರಾಜಕತೆಯಿಂದ ಮುಕ್ತವಾಗಿತ್ತು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಬಿಎಸ್‍ಪಿ ಪಕ್ಷವನ್ನು ಬೆಹನ್‍ಜಿ ಕಿ ಸಂಪತ್ತಿ ಪಾರ್ಟಿ (ಸೋದರಿಯ ಸಂಪತ್ತಿನ ಪಕ್ಷ) ಎಂದು ಕರೆಯಲು ಹಿಂಜರಿಯುವುದಿಲ್ಲ ಎಂದು ಮಾಯಾವತಿ ಹೇಳಿದರು. ಅಲ್ಲದೇ, ಇದೇ ವೇಳೆ ತಮ್ಮ ಆಸ್ತಿ ಕುರಿತು ಸ್ಪಷ್ಟೀಕರಣವನ್ನು ನೀಡಿದ ಅವರು, ಬಿಎಸ್‍ಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು (ಮಾಯಾವತಿ) ಏನೆಲ್ಲ ಹೊಂದಿದ್ದಾರೋ ಅದನ್ನು ಅವರ ಹಿತೈಷಿಗಳು ಮತ್ತು ಸಮಾಜ ಕೊಟ್ಟಿರುವುದು. ಇದರಲ್ಲಿ ಯಾವುದೇ ಸಂಗತಿಯನ್ನು ಸರ್ಕಾರದಿಂದ ಮುಚ್ಚಿಟ್ಟಿಲ್ಲ ಎಂದರು.


ಸಂಬಂಧಿತ ಟ್ಯಾಗ್ಗಳು

Narendra Modi BSP Mayawathi BJP


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ