ದೇವೇಗೌಡರು ಸೋತರೆ ರೇವಣ್ಣ ಪಕ್ಷಾಂತರ..?

Lokasabha Election -2019

15-05-2019

ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಕಣಕ್ಕಿಳಿದಿದ್ದು, ಫಲಿತಾಂಶಕ್ಕೆ ಕೆಲವೇ ದಿನಗಳು ಬಾಕಿ ಇವೆ. ಈ ಮಧ್ಯೆ ಕಾಂಗ್ರೆಸ್ ಹಾಗೂ ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಬಿರುಕು ಜಾಸ್ತಿಯಾಗಿದೆ. ಚುನಾವಣಾ ಫಲಿತಾಂಶ ದೋಸ್ತಿ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದೂ ಸುಳ್ಳಲ್ಲ.

ಈ ಮಧ್ಯೆ ದೇವೇಗೌಡರು ಚುನಾವಣೆಯಲ್ಲಿ ಸೋತುಹೋದರೆ ಹೆಚ್ ಡಿ ರೇವಣ್ಣ ಪಕ್ಷಾಂತರ ಮಾಡುತ್ತಾರಾ ಅನ್ನೋ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿದೆ. ದೇವೇಗೌಡರು ಸೋತರೆ ಜೆಡಿಎಸ್ ಗೆ ಪ್ರಬಲ ಹಿನ್ನೆಡೆಯುಂಟಾಗುವುದು ಖಚಿತ. ಇದರಿಂದ ಅವರು ರಾಜಕೀಯ ನಿವೃತ್ತಿ ಹೊಂದಲೂಬಹುದು. ಇದು ದೋಸ್ತಿ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೇವಣ್ಣ ಕಾಂಗ್ರೆಸ್ ಕೈ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

H D Revanna Congress Devegowda Lokasabha Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ