ನಿಧಾನವಾಗಿ ಕುಗ್ಗುತ್ತಿದೆ ಚಂದ್ರನ ಗಾತ್ರ..!

The Moon Is Shrinking, Wrinkling Due To Earthquakes: Study

15-05-2019

ಹುಣ್ಣಿಮೆ ಚಂದ್ರನ ಸೌಂದರ್ಯವೇ ವರ್ಣನಾತೀತ. ಪೂರ್ಣ ಚಂದಿರ ಅದೆಷ್ಟೋ ಕವಿಗಳಿಗೆ ಸ್ಪೂರ್ತಿ. ಆದರೆ ಅದೇ ಚಂದ್ರನ ಸೌಂದರ್ಯ ಇನ್ನು ಮುಂದೆ ಇರದೇ ಹೋಗಬಹುದು. ಯಾಕೆಂದರೆ ಚಂದ್ರನ ಸೌಂದರ್ಯ ಸುಕ್ಕಾಗುತ್ತಿದೆ. ನಾಸಾ ವಿಜ್ಞಾನಿಗಳು ಈ ಆಘಾತಕಾರಿ ಅಂಶ ಬೆಳಕಿಗೆ ತಂದಿದ್ದಾರೆ. ಚಂದ್ರನಲ್ಲಿ ಕಂಪನಗಳೇಳುತ್ತಿದ್ದು, ಚಂದ್ರನ ಗಾತ್ರ ದಿನೇ ದಿನೇ ಕುಗ್ಗುತ್ತಿದೆ. ಅಲ್ಲದೇ ಚಂದ್ರನ ಮೇಲ್ಮೈ ಸುಕ್ಕುಗಟ್ಟುತ್ತಿದೆ ಎಂದಿದ್ದಾರೆ.

ಚಂದ್ರನ ಮೇಲ್ಮೈನ 12 ಸಾವಿರ ಪೋಟೋಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿ ಈ ಅಂಶ ಸಾಬೀತಾಗಿದೆ. ಕಳೆದ ನೂರಾರು ವರ್ಷಗಳಲ್ಲಿ ಚಂದ್ರ 150 ಅಡಿ ಕುಗ್ಗಿದ್ದಾನೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಭೂಕಂಪ ಸಂಭವಿಸಿದಾಗ ಚಂದ್ರನ ಮೇಲ್ಮೈ ಶಾಖ ಕಡಿಮೆ ಆಗುತ್ತದೆ. ಇದು ಚಂದ್ರನ ಕಾಂತಿ ಕ್ಷೀಣಿಸಲು ಮೂಲ ಕಾರಣ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Moon NASA Shrinking earthquake


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ