ಶ್ರೀನಗರದಲ್ಲಿ ಜೈಶ್ ಉಗ್ರನ ಸೆರೆ

Wanted Jaish Terrorist Carrying 2 Lakh Reward Arrested In Srinagar

14-05-2019

ಜೈಶ್ ಎ ಮೊಹಮ್ಮದ್ ಸಂಘಟನೆಯ ಮೋಸ್ಟ್ ವಾಂಟೆಡ್ ಉಗ್ರ ಅಬ್ದುಲ್ ಮಜೀದ್ ಬಾಬಾ ಸೆರೆಯಾಗಿದ್ದಾನೆ. ಈತನನ್ನು ದೆಹಲಿ ಪೊಲೀಸರ ವಿಶೇಷ ಟೀಂ ಶ್ರೀನಗರದಲ್ಲಿ ಬಂಧಿಸಿದ್ದು, ಇಂದು ಆತನನ್ನು ದೆಹಲಿಗೆ ಕರೆತರಲಾಗುತ್ತದೆ ಎಂದು ವಿಶೇಷ ದಳದ ಡೆಪ್ಯೂಟಿ ಕಮಿಷನರ್ ಸಂಜೀವ್ ಕುಮಾರ್ ಯಾದವ್ ತಿಳಿಸಿದ್ದಾರೆ.

2017 ರಲ್ಲಿ ದೆಹಲಿ ಪೊಲೀಸರು ಹಾಗೂ ಉಗ್ರರ ನಡುವಿನ ಶೂಟೌಟ್ ನಲ್ಲಿ ಈತ ಭಾಗಿಯಾಗಿದ್ದ. ತಲೆಮರೆಸಿಕೊಂಡಿದ್ದ ಈತನ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು.ಈತನ ಸುಳಿವು ನೀಡಿದಲ್ಲಿ 2 ಲಕ್ಷ ರೂ ಬಹುಮಾನ ಘೋಷಿಸಲಾಗಿತ್ತು.


ಸಂಬಂಧಿತ ಟ್ಯಾಗ್ಗಳು

Jaish Terrorist Arrest Srinagar Police


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ