ತಾಯಂದಿರ ದಿನ ಆರಂಭಿಸಿದವಳೆ ಅದನ್ನು ವಿರೋಧಿಸಿದಳು..!

The woman who invented Mother

14-05-2019

ವಿಶ್ವ ತಾಯಂದಿರ ದಿನ ಇಂದು ಭಾವನಾತ್ಮಕ ದಿನವಾಗಿರದೇ ಅದೊಂದು ಕಮರ್ಷಿಯಲ್ ಡೇ ಆಗಿದೆ ಅನ್ನೋದ್ರಲ್ಲಿ ಡೌಟಿಲ್ಲ. ತಾಯಿಯನ್ನು ಸರಿಯಾಗಿ ನೋಡಿಕೊಂಡಿಲ್ಲವೆಂದರೂ ಸರಿ.. ಮದರ್ಸ್ ಡೇ ದಿನ ಆಕೆಗೊಂದು ಗಿಫ್ಟ್ ಕೊಡಿಸಿ ಶುಭಾಶಯ ಹೇಳೋದು ವಿದೇಶಗಳಲ್ಲಿ ಮಾತ್ರವಲ್ಲ.. ನಮ್ಮ ನಗರಗಳಲ್ಲೂ ಕಾಮನ್ ಆಗಿದೆ. ಆದರೆ ಈ ತಾಯಂದಿರ ದಿನವನ್ನು ಹುಟ್ಟುಹಾಕಿದಾಕೆಗೇ ಈ ದಿನ ಹೀಗೆ ವಾಣಿಜ್ಯಮಯವಾಗುವುದು ಇಷ್ಟವಿರಲಿಲ್ಲ.

ಅಮೆರಿಕದ ಅನ್ನ ಜಾರ್ವಿಸ್ ಎಂಬಾಕೆ ವಿಶ್ವತಾಯಂದಿರದ ದಿನಾಚರಣೆ ಕಾರಣಕರ್ತರು. ಈಕೆಯ ತಾಯಿ 1905 ಮೇ 9 ರಂದು ನಿಧನರಾದಾಗ ಕೇವಲ ತನ್ನ ತಾಯಿಗೆ ಮಾತ್ರವಲ್ಲ, ಜಗತ್ತಿನ ಎಲ್ಲ ತಾಯಂದಿರಿಗೂ ಗೌರವಾರ್ಥವಾಗಿ ವಿಶ್ವ ತಾಯಂದಿರ ದಿನದಂದು ಸರ್ಕಾರಿ ರಜಾದಿನವಾಗಿ ಘೋಷಿಸಬೇಕೆಂದು ಆಗ್ರಹಿಸಿದ್ದರು. ಹಲವು ಬಾರಿ ಅವರ ಆಗ್ರಹ ನಿರಾಕರಿಸಲ್ಪಟ್ಟರೂ ಕೊನೆಯಲ್ಲಿ 1914ರಲ್ಲಿ ಅಧ್ಯಕ್ಷ ವುಡ್ರಾವ್ ವಿಲ್ಸನ್ ತಾಯಂದಿರ ದಿನವನ್ನು ಸರ್ಕಾರಿ ರಜಾ ದಿನವನ್ನಾಗಿ ಘೋಷಿಸಿದರು.

ಈ ಎಲ್ಲದರ ಮಧ್ಯೆ ಜಾರ್ವಿಸ್ ಅಂದುಕೊಂಡದ್ದಕ್ಕಿಂತ ತಾಯಂದಿರ ದಿನ ಹೆಚ್ಚು ಪ್ರಸಿದ್ಧಿ ಪಡೆಯಿತು. ಜನರು ದುಬಾರಿ ಗಿಫ್ಟ್ ಗಳನ್ನು, ಕಾರ್ಡ್ ಗಳನ್ನು ನೀಡಿ ಅದನ್ನು ವಾಣಿಜ್ಯೀಕರಣಗೊಳಿಸಿದರು. ಇದರ ವಿರುದ್ಧ ಜಾರ್ವಿಸ್ ದನಿಯೆತ್ತಿದರು. ಪ್ರತಿಭಟಿಸಿದರು. ಆದರೆ ಮದರ್ಸ್ ಡೇ ಅನ್ನೋದು ಕಮರ್ಷಿಯಲ್ ಡೇ ಆಗಿ ಬದಲಾಗಿಬಿಟ್ಟಿತ್ತು.

1948 ರಲ್ಲಿ ಜಾರ್ವಿಸ್ ನಿಧನರಾದರೂ ಅವರ ಹೋರಾಟದ ಫಲವಾಗಿ ತಾಯಂದಿರ ದಿನವನ್ನು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಆದರೆ ಮೂಲ ಉದ್ದೇಶವನ್ನೇ ಮರೆತು ಆಚರಣೆ ಮಾಡುತ್ತಿರುವುದು ಸ್ವತಃ ಜಾರ್ವಿಸ್ ಗೆ ಕೂಡ ಇಷ್ಟವಿರಲಿಲ್ಲ ಎನ್ನೋದೇ ವಿಷಾದ.

ಅಮೆರಿಕದಲ್ಲಿ ತಾಯಂದಿರ ದಿನದಂದು ಈ ವರ್ಷ ಸುಮಾರು 2500 ಕೋಟಿ ರೂ ವಹಿವಾಟು ನಡೆದಿದೆ.


ಸಂಬಂಧಿತ ಟ್ಯಾಗ್ಗಳು

Mothers day America Women Anna Jarvis


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ