‘ವೀಕೆಂಡ್’ ನಲ್ಲಿ ಇಂಪಾಗಿರಬೇಕಿತ್ತು ವಿನಯಾ ಪ್ರಸಾದ್ ದನಿ..!

13-05-2019
ಜೀ ಕನ್ನಡ ವಾಹಿನಿಯ ಸಾಧಕರನ್ನು ಮಾತನಾಡಿಸುವ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಸೀಸನ್ 4 ನಲ್ಲಿ ನಟಿ ವಿನಯಾ ಪ್ರಸಾದ್ ತನ್ನ ಜೀವನವನ್ನು ಮೆಲುಕು ಹಾಕಿದ್ದಾರೆ.
ನಟಿ ವಿನಯ ಪ್ರಸಾದ್ ದಕ್ಷಿಣದ ಜನಪ್ರಿಯ ನಟಿಯಾಗಿದ್ದು, ಟಿವಿ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ವಿಷ್ಣುವರ್ಧನ್, ರವಿಚಂದ್ರನ್, ಮೋಹನ್ ಲಾಲ್, ರಜನಿಕಾಂತ್, ಅನಂತ್ ನಾಗ್, ಅಂಬರೀಶ್, ಚಿರಂಜೀವಿ, ಶಿವರಾಜ್ ಕುಮಾರ್ ಹೀಗೆ ಸೌತ್ ಇಂಡಿಯಾದ ಬಹಳಷ್ಟು ಸೂಪರ್ ಸ್ಟಾರ್ ಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ ನಟಿ ವಿನಯಾ ಪ್ರಸಾದ್.
ವಿನಯಾ ಪ್ರಸಾದ್ ಪ್ರತಿಭಾವಂತ ನಟಿ ಅನ್ನೋದ್ರಲ್ಲಿ ಡೌಟಿಲ್ಲ. ಅವರು ಕಾರ್ಯಕ್ರಮದಲ್ಲಿ ಹಾಡಿದರು, ಜೀವನದ ನೆನಪುಗಳನ್ನು ಹಂಚಿಕೊಂಡರು.. ಇವೆಲ್ಲಾ ಸರಿ. ಆದರೆ ವೇದಿಕೆಯ ಮೇಲೆ ಅವರು ಏರುಧ್ವನಿಯಲ್ಲಿ ಮಾತನಾಡುತ್ತಿದ್ದುದು ಸ್ವಲ್ಪ ವೀಕ್ಷಕರಿಗೆ ಕಿರಿಕಿರಿಯಾಗಿತ್ತು. ವಿನಯಾ ಪ್ರಸಾದ್ ಕಂಠ ನೋಡಿದ ವೀಕ್ಷಕರು, ಇವರೇನು ಸದ್ಯ ರಾಜಕೀಯ ಸೇರುತ್ತಾರಾ ಅಂತಾ ಅನುಮಾನಿಸಿದ್ದು ಸುಳ್ಳಲ್ಲ.
ಒಂದು ಕಮೆಂಟನ್ನು ಹಾಕಿ