ಕಲರ್ಸ್ ವಾಹಿನಿ ಹಿಂದಿಕ್ಕಿ ನಂ.1 ಪಟ್ಟಕ್ಕೇರಿದ ಜೀ ಕನ್ನಡ

Zee Kannada become no.1 in Kannada entertainment channels

13-05-2019

ಕನ್ನಡದ ಮನೋರಂಜನಾ ಚಾನೆಲ್ ಗಳಲ್ಲಿ ಭಾರೀ ಟಿಆರ್ ಪಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಜನಮೆಚ್ಚುಗೆ ಪಡೆದ ಧಾರಾವಾಹಿ, ರಿಯಾಲಿಟಿ ಶೋಗಳನ್ನು ನೀಡುತ್ತಿರುವ ಕಲರ್ಸ್ ಕನ್ನಡ ಹಾಗೂ ಜೀ ಕನ್ನಡದ ಮಧ್ಯೆ ಮೊದಲಿನಿಂದಲೂ ಸ್ಪರ್ಧೆ ನಡೆಯುತ್ತಲೇ ಇದೆ. ಈ ಮಧ್ಯೆ ಸದ್ಯ ಜೀ ಕನ್ನಡ, ಕಲರ್ಸ್ ಕನ್ನಡವನ್ನು ಹಿಂದಿಕ್ಕಿ ನಂ 1 ಸ್ಥಾನ ಪಡೆದುಕೊಂಡಿದೆ. ಕಳೆದ 6 ವಾರಗಳಿಂದ ನಂ.1 ಪಟ್ಟಕ್ಕೇರಿರುವ ಜೀ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಸರೆಗಮಪ, ವೀಕೆಂಡ್ ವಿತ್ ರಮೇಶ್, ಡ್ರಾಮಾ ಮುಂತಾದ ಕಾರ್ಯಕ್ರಮಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರೂ ಮತ್ತದೇ ಹಳೆಯ ಕಥಾ ಹಂದರ ಹೊಂದಿರುವ ಧಾರಾವಾಹಿಗಳು ತಕ್ಕ ಮಟ್ಟಿಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಫಲವಾಗಿವೆ. ಇನ್ನು ಕಲರ್ಸ್ ನಲ್ಲಿ 4-5 ವರ್ಷಗಳಿಂದ ಪ್ರಸಾರವಾಗುತ್ತಿರುವ ಧಾರಾವಾಹಿಗಳು ಪ್ರೇಕ್ಷಕರಿಗೆ ಬೇಸರ ತರಿಸಿರುವುದು ಸುಳ್ಳಲ್ಲ. ಒಟ್ಟಿನಲ್ಲಿ ಪ್ರೇಕ್ಷಕರ ಅಭಿರುಚಿಯೋ ಅಥವಾ ಕಾರ್ಯಕ್ರಮ ನಿರ್ಮಾಪಕರ ಜಾಣತನವೋ ಗೊತ್ತಿಲ್ಲ… ಒಟ್ಟಿನಲ್ಲಿ ಜೀ ನಂ.1 ಪಟ್ಟಕ್ಕೇರಿದೆ.


ಸಂಬಂಧಿತ ಟ್ಯಾಗ್ಗಳು

Zee Kannada TRP Colors Kannada Programmes


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ