ತುರಹಳ್ಳಿ ಫಾರೆಸ್ಟ್ ನಲ್ಲಿನ್ನು ಸೈಕ್ಲಿಂಗ್ ನಿಷೇಧ

Forest dept bans cycling inside Turahalli forest

13-05-2019

ಬೆಂಗಳೂರಿನ ಹೊರವಲಯದಲ್ಲಿರುವ ತುರಹಳ್ಳಿ ಮೀಸಲು ಅರಣ್ಯ ಪ್ರದೇಶದೊಳಗೆ ಸೈಕ್ಲಿಂಗ್ ಅನ್ನು ನಿಷೇಧ ಮಾಡಿರುವುದಾಗಿ ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 500 ಎಕರೆ ಅರಣ್ಯ ಪ್ರದೇಶವಿದ್ದು, ಇಲ್ಲಿ ರಸ್ತೆ ಇದ್ದರೂ ಅದು ಅಧಿಕಾರಿಗಳಿಗೆ ಗಸ್ತು ತಿರುಗಲು ಹಾಗೂ ಕಾಡ್ಗಿಚ್ಚು ಮುಂತಾದ ಸಂದರ್ಭ ಎದುರಾದರೆ ಇರುವಂಥದ್ದು ಎಂದು ಸಹಾಯಕ ಕನ್ಸರ್ ವೆಟಿವ್ ಜಿ ವೆಂಕಟೇಶ್ ಹೇಳಿದ್ದಾರೆ. ಯಾರಾದರೂ ಇದನ್ನು ಉಲ್ಲಂಘಿಸಿದರೆ ಸೈಕಲ್ ಸೀಜ್ ಮಾಡುಲಾಗುತ್ತದೆಯಲ್ಲದೇ ಅಂಥವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಅಲ್ಲದೇ ಕಾಡು ಪ್ರಾಣಿಗಳ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಕಾಡಿನ ಸುರಕ್ಷತೆಯ ದೃಷ್ಟಿಯಿಂದಲೂ ಸೈಕ್ಲಿಂಗ್ ನಿಷೇಧ ಅನಿವಾರ್ಯ ಎಂದು ಅವರು ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bengalore Cycling Turahali Forest Forest department


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ