ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಪ್ಲಾಸ್ಟಿಕ್ ಮೊಟ್ಟೆ ಮತ್ತು ಅಕ್ಕಿ ಪ್ರಕರಣಗಳು !

Kannada News

08-06-2017

ರಾಜ್ಯದ ಅಲ್ಲಲ್ಲಿ ಪ್ಲಾಸ್ಟಿಕ್ ಮೊಟ್ಟೆ, ಅಕ್ಕಿ, ಸಕ್ಕರೆ ಕಂಡುಬರುತ್ತಿದ್ದು ಜನರು ಆತಂಕಕ್ಕೆ ಒಳಗಾಗಿರುವ ಬೆನ್ನಲ್ಲೇ ಇದೀಗ ರೇಷ್ಮೆ ನಗರಿ ರಾಮನಗರ ಜಿಲ್ಲೆಗೂ ಪ್ಲಾಸ್ಟಿಕ್ ಅಕ್ಕಿ ಹಾಗೂ ಮೊಟ್ಟೆ ಕಾಲಿಟ್ಟಿದ್ದು ಆತಂಕಕ್ಕೆ ಕಾರಣವಾಗಿದೆ. ಕನಕಪುರದ ಮನೆಯೊಂದರಲ್ಲಿ  ನಿನ್ನೆ ರಾತ್ರಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಪತ್ತೆಯಾಗಿದೆ. ಈ ಅಕ್ಕಿಯನ್ನು ಬೇಯಿಸಿದ ನಂತರ ಕುಟುಂಬದವರಿಗೆ ಪ್ಲಾಸ್ಟಿಕ್ ಅಕ್ಕಿ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಮಾಗಡಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಮೊಟ್ಟೆ ಪತ್ತೆಯಾಗಿ ಜನರಲ್ಲಿ ಆತಂಕ ಉಂಟುಮಾಡಿದೆ. ಮಾಗಡಿ ಪಟ್ಟಣದ ಕಲ್ಯಾಗೇಟ್ ಬಳಿ ಇರುವ ಲಕ್ಷಿದೇವಿ ಎಂಬುವರ ಮನೆಯಲ್ಲಿ ಬೆಳಗಿನ ಉಪಹಾರ ತಯಾರಿಸಲು ಮುಂದಾದಾಗ ಪ್ಲಾಸ್ಟಿಕ್ ಮೊಟ್ಟೆ ಕಂಡುಬಂದಿದೆ. ಮೊಟ್ಟೆಯ ಒಳಭಾಗದಲ್ಲಿ ಪ್ಲಾಸ್ಟಿಕ್ ನಂತಹ ವಸ್ತು ಕಂಡುಬಂದಿದ್ದು, ನೀರಿಗೆ ಹಾಕಿದಾಗ ಕೆಟ್ಟವಾಸನೆ ಬಂದಿದೆಯಂತೆ. ಈ ಸಂದರ್ಭದಲ್ಲಿ ಕುಟುಂಬದವರು ಎಚ್ಚೆತ್ತುಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ