ತಾಯಿಯೇ ನನಗೆ ರೋಲ್ ಮಾಡೆಲ್ : ದೀಪಿಕಾ ಪಡುಕೋಣೆ

Deepika Padukone Gets Her

13-05-2019

ವಿಶ್ವ ತಾಯಂದಿರ ದಿನದ ಪ್ರಯುಕ್ತ ಅನೇಕ ತಾರೆಯರು ತಮ್ಮ ತಾಯಿಯ ಜೊತೆಗಿನ ಪೋಟೋ ಹಾಗೂ ಅವರೊಂದಿಗಿನ ನೆನಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಹಾಗೇಯೆ ನಟಿ ದೀಪಿಕಾ ಪಡುಕೋಣೆ ಕೂಡಾ ನೆನಪುಗಳನ್ನು ಹಂಚಿಕೊಂಡಿದ್ದು, ತಾಯಿಯೇ ರೋಲ್ ಮಾಡೆಲ್ ಎಂದಿದ್ದಾರೆ.

ಅಭಿನಯ ಹಾಗೂ ಸೌಂದರ್ಯದಿಂದಲೇ ಬಾಲಿವುಡ್ ನಲ್ಲಿ ಛಾಪು ಮೂಡಿಸಿರುವ ದೀಪಿಕಾ, ತಾಯಿ ಉಜ್ಜಲಾ ಪಡುಕೋಣೆಯೊಂದಿಗಿನ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಾನು ನಟನೆಯ ಪಾಠ ಕಲಿತಿದ್ದು ತನ್ನ ತಾಯಿಯಿಂದಲೇ ಎಂದಿದ್ದಾರೆ. ತನ್ನ ಸ್ನೇಹಿತೆ, ಮಾರ್ಗದರ್ಶಕಿ, ನಿರೂಪಕಿ ಒಟ್ಟಿನಲ್ಲಿ ತನ್ನ ತಾಯಿಯೇ ನನ್ನ ರೋಲ್ ಮಾಡೆಲ್ ಎಂದಿದ್ದು, ತಾಯಂದಿರ ದಿನದ ಶುಭಾಶಯ ತಿಳಿಸಿದ್ದಾರೆ.

ಸದ್ಯ ದೀಪಿಕಾ ಪಡುಕೋಣೆ, ಮೇಘನಾ ಗುಲ್ಜಾರ್ ನಿರ್ದೇಶನದ ಚಪ್ಪಕ್ ಚಿತ್ರದಲ್ಲಿ ನಟಿಸುತ್ತಿದ್ದು, ಮುಂದಿನ ವರ್ಷ ಜನವರಿ 10 ರಂದು ತೆರೆಕಾಣಲಿದೆ.


ಸಂಬಂಧಿತ ಟ್ಯಾಗ್ಗಳು

Deepika Padukone Mother’s day Ujjala Padukone Role Model


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ