ತೀವ್ರ ವಾಯುಮಾಲಿನ್ಯ: 52 ಸಾವಿರ ಮಂದಿ ಸಾವು

Air Pollution Killed 52,000 in Turkey

13-05-2019

ಮನುಷ್ಯದ ಅತಿಯಾಸೆಯಿಂದಾಗಿ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದಕ್ಕೆ ಭಾರತವೂ ಹೊರತೇನಲ್ಲ. ಆದರೆ ಟರ್ಕಿ ದೇಶದಲ್ಲಿ ವಾಯುಮಾಲಿನ್ಯ ತೀವ್ರವಾಗಿದ್ದು, ಇಲ್ಲಿ 2017 ರಲ್ಲಿ ಬರೋಬ್ಬರಿ 52 ಸಾವಿರ ಜನ ಸಾವನ್ನಪ್ಪಿದ್ದಾರೆ.

ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿರುವುದಿಂದ ಅಸ್ತಮಾ, ಶ್ವಾಸಕೋಶದ ಕಾಯಿಲೆಗಳು, ಉಸಿರಾಟದ ಸೋಂಕು, ಬಂಜೆತನ, ಶಿಶುಗಳ ಸಾವಿನ ಸಂಖ್ಯೆ ಹೆಚ್ಚಳ, ಶಿಶುಗಳಲ್ಲಿ ಮಂದಬುದ್ಧಿ ಮುಂತಾದವು ಸಾಮಾನ್ಯವಾಗಿ ಕಂಡುಬರುವಂಥವು.

ಕಾರ್ಖಾನೆಗಳು ಉಗುಳುವ ಹೊಗೆ, ಮರಗಳನ್ನು ಕಡಿಯುವುದು, ವಾಹನಗಳ ಹೊಗೆ ಇವೆಲ್ಲದರಿಂದಾಗಿ ವಾಯುಮಾಲಿನ್ಯ ಹೆಚ್ಚಾಗುತ್ತದೆ. ರೈಟ್ ಟು ಕ್ಲೀಯರ್ ಏರ್ ಪ್ಲಾಟ್ ಫಾರ್ಮ್ ಎನ್ನುವ ಸಂಸ್ಥೆ ಟರ್ಕಿಯಲ್ಲಿ ವಾಯುಮಾಲಿನ್ಯದ ಬಗ್ಗೆ ಅಧ್ಯಯನ ನಡೆಸಿದ್ದು, 2016 ರಿಂದ 2018 ರ ವರೆಗೆ ವಾಯುಮಾಲಿನ್ಯದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 7 ಪಟ್ಟು ಹೆಚ್ಚಾಗಿದೆ ಎಂದಿದೆ.


ಸಂಬಂಧಿತ ಟ್ಯಾಗ್ಗಳು

Turkey Lung diseases Air Pollution Asthma


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ