ಬಾಲಿವುಡ್ ಆ್ಯಕ್ಟಿಂಗ್ ಗುರು ರೋಶನ್ ತನೇಜಾ ಇನ್ನಿಲ್ಲ

Bollywood’s acting guru Roshan Taneja dies at 87

11-05-2019

ಬಾಲಿವುಡ್ ಪ್ರಸಿದ್ಧ ನಟ ನಟಿಯವರಿಗೆ ನಟನೆ ಹೇಳಿಕೊಟ್ಟ ನಟನಾ ಗುರು ರೋಶನ್ ತನೇಜಾ ನಿಧನರಾಗಿದ್ದಾರೆ.  87 ವರ್ಷದ ತನೇಜಾ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಇವರು ಬಾಲಿವುಡ್ ನ ಶಬಾನಾ ಅಜ್ಮಿ, ನಾಸಿರುದ್ದೀನ್ ಶಾ, ಜಯಾ ಬಚ್ಚನ್, ಅನಿಲ್ ಕಪೂರ್, ಶತೃಘ್ನ ಸಿನ್ಹಾ ಮುಂತಾದವರಿಗೆ ಗುರುಗಳಾಗಿದ್ದರು. 1960 ರಿಂದಲೇ ನಟನೆಯನ್ನು ಹೇಳಿಕೊಡುತ್ತಿದ್ದ ತನೇಜಾ ಅವರು, ಮುಂಬೈನಲ್ಲಿ ನಟನಾ ಶಾಲೆಯನ್ನೂ ಅವರು ನಡೆಸುತ್ತಿದ್ದರು. ರೋಶನ್ ತನೇಜಾ ಅವರ ನಿಧನಕ್ಕೆ ಬಾಲಿವುಡ್ ನ ನಟ ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Bollywood Acting Roshan Taneja Filmmaker


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ