ಬಾತ್ ರೂಂ ನಲ್ಲಿ 5 ದಿನ ಕಳೆದ ಬಾಲಕಿ

7-year-old gets trapped in bathroom, survives on water for five days

10-05-2019

7 ವರ್ಷದ ಬಾಲಕಿಯೊಬ್ಬಳು ನೆರೆಮನೆಯ ಬಾತ್ ರೂಂ ನಲ್ಲಿ ಸಿಕ್ಕಿಬಿದ್ದು, 5 ದಿನ ಗಳ ಕಾಲ ಆಹಾರವಿಲ್ಲದೇ ಕಾಲ ಕಳೆದ ಘಟನೆ ತೆಲಂಗಾಣದಲ್ಲಿ  ನಡೆದಿದೆ.

ಇಲ್ಲಿನ ನಾರಾಯಣಪೇಟ್ ಜಿಲ್ಲೆಯ ಮಕ್ತಾಲ್ ಎಂಬಲ್ಲಿ ಆಟವಾಡುತ್ತಿದ್ದ ಅಖಿಲಾ ಆಯತಪ್ಪಿ ಪಕ್ಕದಮನೆಯ ಸ್ನಾನದ ಕೋಣೆಯಲ್ಲಿ ಬಿದ್ದಿದ್ದಾಳೆ. ಸಹಾಯಕ್ಕಾಗಿ ಕೂಗಿದರೂ ಯಾರಿಗೂ ಆಕೆಯ ಧ್ವನಿ ಕೇಳಿಸಿಲ್ಲ. ಈ ಮಧ್ಯೆ ಆ ಮನೆಯವರು ಮದುವೆಗೆಂದು ಬೇರೆ ಊರಿಗೆ ಹೋಗಿದ್ದಾರೆ. 5 ದಿನಗಳ ಬಳಿಕ ವಾಪಸ್ ಬಂದಾಗ ವಿಷಯ ತಿಳಿದಿದೆ.

ಅಖಿಲಾ ಪೋಷಕರು ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಅಖಿಲಾ ಸಿಕ್ಕಿದಾಗ ಆಕೆ ಮಾತನಾಡುವ ಸ್ಥಿತಿಯಲ್ಲೂ ಇರಲಿಲ್ಲ. 5 ದಿನಗಳ ಕಾಲ ಆಹಾರವಿಲ್ಲದೇ ಬರೀ ನೀರನ್ನೇ ಕುಡಿದು ಬದುಕಿದ್ದ ಆಕೆಯನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಸಂಬಂಧಿತ ಟ್ಯಾಗ್ಗಳು

Telangana Police Girl Play


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ