ಅಯೋಧ್ಯೆ ವಿವಾದ: ವರದಿ ನೀಡಲು ಅ.15 ವರೆಗೆ ಕಾಲಾವಕಾಶ

Ayodhya land dispute case: SC extends time for mediation panel till August 15

10-05-2019

ದಶಕಗಳಿಂದ ಕಗ್ಗಂಟಾಗಿರುವ ಅಯೋಧ್ಯೆ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ಸಮಿತಿಗೆ ವರದಿ ನೀಡಲು ಆಗಸ್ಟ್ 15 ರವರೆಗೆ ಸುಪ್ರೀಂ ಕೋರ್ಟ್ ಕಾಲಾವಕಾಶ ನೀಡಿದೆ.

ಈ ಕುರಿತು ಇಂದು ವಿಚಾರಣೆ ನಡೆಸಿರುವ ಸುಪ್ರೀಂ, ಮಧ್ಯಸ್ಥಿಕೆ ಮಂಡಳಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೆಚ್ಚಿನ ಸಮಯ ಯಾಚಿಸಿರುವುದರಿಂದ, ಸಮಯ ನೀಡುವುದು ಸಮಂಜಸ ಎಂದು ಸಾಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ಅಭಿಪ್ರಾಯಪಟ್ಟರು.

ಮಧ್ಯಸ್ಥಿಕೆ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ಎಫ್ಎಂ ಕಲಿಫುಲ್ಲಾ, ಆಧ್ಯಾತ್ಮಿಕ ಗುರು ರವಿ ಶಂಕರ್ ಗುರೂಜಿ ಮತ್ತು ನ್ಯಾಯವಾದಿ ಶ್ರೀರಾಮ್ ಪಂಚು ಅವರಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ayodhya Ram Janmbhoomi Supreme Court Panel


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ