ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲೇ ಸ್ಥೂಲಕಾಯದ ಸಮಸ್ಯೆ ಹೆಚ್ಚು..!

Rural areas have more obesity cases than urban areas

10-05-2019

ಇತ್ತೀಚಿಗೆ ಸ್ಥೂಲಕಾಯ ಅನ್ನೋದು ಎಲ್ಲೆಡೆ ಕಂಡುಬರುತ್ತಿರುವ ಸಮಸ್ಯೆ. ಸ್ಥೂಲಕಾಯದಿಂದಾಗಿ ದೇಹದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಗರದಲ್ಲಿ ಜಂಕ್ ಫುಡ್ ತಿನ್ನೋದ್ರಿಂದ, ವ್ಯಾಯಾಮದ ಕೊರತೆಯಿಂದ, ಕುಳಿತು ಕೆಲಸ ಮಾಡೋದ್ರಿಂದ ಒಬೆಸಿಟಿ ಸಮಸ್ಯೆ ಬರುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಇತ್ತೀಚಿನ ಸಂಶೋಧನೆ ಪ್ರಕಾರ ನಗರಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲೇ ಸ್ಥೂಲಕಾಯದ ಸಮಸ್ಯೆ ಹೆಚ್ಚಾಗುತ್ತಿದೆ.

ಅಮೆರಿಕದಲ್ಲಿ ಅಧ್ಯಯನ ಸಂಸ್ಥೆಯೊಂದು 1985 – 2017 ರ ವರೆಗೆ ನಡೆಸಿದ ಸಂಶೋಧನೆಯ ಪ್ರಕಾರ  ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಸ್ಥೂಲಕಾಯದ ಸಮಸ್ಯೆ ಕಂಡುಬಂದಿದೆ. ಎತ್ತರಕ್ಕೆ ತಕ್ಕಂತ ತೂಕವಿರುವ ಬದಲು 5-6 ಕೆಜಿ ಹೆಚ್ಚು ತೂಕವಿರುವುದು ಕಂಡುಬಂದಿದೆ. ಸುಮಾರು 200 ದೇಶಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ.

ಸ್ಥೂಲಕಾಯ ಅನ್ನೋದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದನ್ನು ಆರೋಗ್ಯಕರ ಜೀವನಪದ್ಧತಿ ಮೂಲಕ ಹತ್ತಿಕ್ಕದಿದ್ದರೆ ಮುಂದೆ ಇದೊಂದು ಗಂಭೀರ ಸಮಸ್ಯೆಯಾಗುವುದರಲ್ಲಿ ಸಂದೇಹವೇ ಇಲ್ಲ.


ಸಂಬಂಧಿತ ಟ್ಯಾಗ್ಗಳು

Rural Obesity Urban Global


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ