ಚೀನಾಕ್ಕೆ ರಫ್ತಾಗಲಿದೆ ಭಾರತದ ಕೆಂಪುಮೆಣಸು

Indian chilli meals to soon make Chinese markets spicier

10-05-2019

ಭಾರತ ಹಾಗೂ ಚೀನಾ ನಡುವೆ ಸಾಕಷ್ಟು ರಾಜತಾಂತ್ರಿಕ ಭಿನ್ನಾಭಿಪ್ರಾಯಗಳಿವೆ. ಈ ಮಧ್ಯೆ ಮೆಣಸಿನ ರಫ್ತು ವಿಚಾರಕ್ಕೆ ಸಂಬಂಧಿಸಿದಂತೆ ಈ ಎರಡೂ ದೇಶಗಳ ಮಧ್ಯೆ ಒಪ್ಪಂದವಾಗಿದೆ. ಭಾರತದಿಂದ ದೊಡ್ಡ ಪ್ರಮಾಣದಲ್ಲಿ ಮೆಣಸನ್ನು ಚೀನಾ ಆಮದು ಮಾಡಿಕೊಳ್ಳಲಿದೆ. ಇದನ್ನು ಚಿಲ್ಲಿ ಸಾಸ್ ತಯಾರಿಕೆಗೆ ಹಾಗೂ ಇತರ ಆಹಾರ ಪದಾರ್ಥಗಳಲ್ಲಿ ಬಳಸುತ್ತಾರೆ.

ಕೆಂಪು ಮೆಣಸನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವ ದೇಶಗಳಲ್ಲಿ ಭಾರತವೂ ಒಂದು. ಆಂಧ್ರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಸುಮಾರು 7,92,000 ಹೆಕ್ಟೇರ್ ಪ್ರದೇಶಗಳಲ್ಲಿ ಮೆಣಸನ್ನು ಬೆಳೆಯಲಾಗುತ್ತಿದೆ.  ಕಳೆದ ವರ್ಷ ಚೀನಾ, ಭಾರತದ ಮಾವಿನಹಣ್ಣು, ಅಕ್ಕಿ ಹಾಗೂ ದ್ರಾಕ್ಷಿಹಣ್ಣಿಗೆ ಮಾರುಕಟ್ಟೆ ಒದಗಿಸಿತ್ತು.


ಸಂಬಂಧಿತ ಟ್ಯಾಗ್ಗಳು

Chilli India China Export


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ