ರ್ಯಾಲಿ ವೇಳೆ ನಸ್ರತ್ ಜಹಾನ್ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ

Selfie Rush With Trinamool

09-05-2019

ಪಶ್ಚಿಮ ಬಂಗಾಳದ ಜರಗ್ರಮ್ ನಲ್ಲಿ ತೃಣಮೂಲ ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಬೆಂಗಾಲಿ ನಟಿ ನಸ್ರತ್ ಜಹಾನ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದ ಪರಿಣಾಮ ನೂಕು ನುಗ್ಗಲು ಸಂಭವಿಸಿದ ಘಟನೆ ನಡೆದಿದೆ.

ಸ್ಟಾರ್ ಪ್ರಚಾರಕಿ ಹಾಗೂ ಸ್ವತಃ ಅಭ್ಯರ್ಥಿಯಾಗಿರುವ ನಟಿ ನಸ್ರತ್ ಜಹಾನ್, ಟಿಎಂಸಿ ಅಭ್ಯರ್ಥಿ ಬೀರ್ ಬಹ ಸೊರೆನ್ ಪರ ಪ್ರಚಾರಕ್ಕೆ ತೆರಳಿದ್ದ ವೇಳೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಒಮ್ಮೆಲೆ ನುಗ್ಗಿದ್ದರಿಂದ ಸ್ಟೇಜ್ ಕೂಡ ಮುರಿದುಬಿದ್ದಿದ್ದು, ನೂಕಾಟ ಸಂಭವಿಸಿದೆ. ಆದರೆ ಯಾರಿಗೂ ಗಾಯಗಳಾದ ಬಗ್ಗೆ ವರದಿಯಾಗಿಲ್ಲ.


ಸಂಬಂಧಿತ ಟ್ಯಾಗ್ಗಳು

Nusrat Jahan Rally Trinamool Congress Actor


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ