ಫನಿ ಎಫೆಕ್ಟ್ : ಪುರಿಯಲ್ಲಿ ಕರೆಂಟ್ ಕಾಣಲು 1 ತಿಂಗಳು ಬೇಕು

Cyclone-hit Puri may not get power for a month

09-05-2019

ಭೀಕರ ಚಂಡಮಾರುತ ಫನಿಯಿಂದಾಗಿ ಒಡಿಶಾ ಅಲ್ಲೋಲ ಕಲ್ಲೋಲವಾಗಿದೆ. ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಜನರ ಮನೆ-ಮಠ, ಆಸ್ತಿ-ಪಾಸ್ತಿ ಕೊಚ್ಚಿ ಹೋಗಿದೆ. ಬದುಕು ಮೂರಾಬಟ್ಟೆಯಾಗಿದೆ.

ಈ ಮಧ್ಯೆ ಪುರಿಯಲ್ಲಿ ಕರೆಂಟ್ ಬರಲು ಇನ್ನೂ ಒಂದು ತಿಂಗಳು ಕಾಯಬೇಕಾಗಬಹುದು ಎಂದು ಅಲ್ಲಿನ ಮಾಹಿತಿ ಕಾರ್ಯದರ್ಶಿ ಸಂಜಯ್ ಸಿಂಗ್ ತಿಳಿಸಿದ್ದಾರೆ. ಇನ್ನುಳಿದಂತೆ ಭುವನೇಶ್ವರ, ಚುತ್ತಕ್ ಗಳಲ್ಲಿ ಇನ್ನು ಕೆಲವು ದಿನಗಳಲ್ಲಿ ವಿದ್ಯುತ್ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ಇನ್ನು ಸ್ಟ್ರಾಂಗ್ ರೂಂ ಗಳಲ್ಲಿ ವಿದ್ಯುತ್ ಪೂರೈಕೆ ಇಲ್ಲದೇ ಹೋದರೂ ಡೀಸೇಲ್ ಜನರೇಟ್ ಇದ್ದು, ಸಿಸಿಟಿವಿ ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Cyclone Puri Fani Power


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ