ಮೌಂಟ್ ಎವರೆಸ್ಟ್ ನಲ್ಲಿ 5,000 ಕೆಜಿ ಕಸ ಸಂಗ್ರಹ: ನೇಪಾಳ

Five tons of garbage collected from Mount Everest

09-05-2019

ಜಗತ್ತಿನ ಅತ್ಯಂತ ಎತ್ತರದ ಹಿಮಪರ್ವತ ಮೌಂಟ್ ಎವರೆಸ್ಟ್‍ ಸ್ವಚ್ಛತಾ ಕಾರ್ಯವನ್ನು ನೇಪಾಳದ ಅಧಿಕಾರಿಗಳು ನೇಪಾಳದ ಸೇನೆಯ ಸಹಕಾರದೊಂದಿಗೆ ಕೈಗೊಂಡಿದ್ದಾರೆ. ಏಪ್ರಿಲ್ 14ರಿಂದ ಇದುವರೆಗೆ 5,000 ಕೆಜಿ ಕಸವನ್ನು ಸಂಗ್ರಹಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ನೇಪಾಳ ಪ್ರವಾಸೋದ್ಯಮ ಡಿಜಿ ದಂದು ರಾಜ್ ಘಿಮಿರೆ, ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, 5,000 ಕೆಜಿ ಕಸವನ್ನು ಸಂಗ್ರಹಿಸಿದ್ದೇವೆ ಎಂದು ತಿಳಿಸಿದ್ದಾರೆ.

ಹಿಮಾಲಯದಲ್ಲಿ ಒಮ್ಮೆ ಸೇರಿಕೊಂಡ ಕಸ ಶಾಶ್ವತವಾಗಿ ಉಳಿದು ಬಿಡುತ್ತದೆ. ಅದು ಕೊಳೆಯುವುದಿಲ್ಲ. ಆದ ಕಾರಣ ಕಾಲಕಾಲಕ್ಕೆ ಹಿಮಪರ್ವತಗಳಲ್ಲಿರುವ ಕಸವನ್ನು ಸಂಗ್ರಹಿಸುವ ಕೆಲಸವನ್ನು ಕೈಗೊಳ್ಳಲಾಗುತ್ತದೆ. ಭವಿಷ್ಯದ ದೃಷ್ಟಿಯಿಂದ ಕೂಡ ಹಿಮಪರ್ವತಗಳ ಸ್ವಚ್ಛತೆ ಅಗತ್ಯ ಎಂದು ಪರಿಸರ ತಜ್ಞರು ಅಭಿಪ್ರಾಯಪಡುತ್ತಾರೆ.


ಸಂಬಂಧಿತ ಟ್ಯಾಗ್ಗಳು

Nepal Garbage Mount Everest Himalaya


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ