ತೂಕ ಇಳಿಕೆಗೆ ಶಿಲ್ಪಾ ಶೆಟ್ಟಿ ಹೇಳಿದ ಪಾನೀಯ

This Is The Drink That Shilpa Shetty Swears By For Her Weight Loss Goals

09-05-2019

ಇತ್ತೀಚಿಗೆ ಸ್ಥೂಲಕಾಯ ಅನ್ನೋದು ಎಲ್ಲರಲ್ಲೂ ಕಂಡುಬರುವ ದೊಡ್ಡ ಸಮಸ್ಯೆ. ಬಹಳಷ್ಟು ಜನರಿಗೆ ಆಕರ್ಷಕವಾಗಿ ಕಾಣಬೇಕು ಅನ್ನೋ ಆಸೆ ಇರುತ್ತದೆ. ಆದರೆ ನಟಿಮಣಿಯರನ್ನು ನೋಡಿ, ತಾವೂ ಹಾಗಿರಬೇಕಿತ್ತು ಅಂತ ಆಸೆ ಪಡುತ್ತಾರೆಯೇ ಹೊರತು ಹಾಗೆ ಕಾಣೊದಿಕ್ಕೆ ಸಾಧ್ಯವೇ ಆಗೋದಿಲ್ಲ.

ಮೂಲತಃ ಕರಾವಳಿಯವರಾದ ಶಿಲ್ಪಾ ಶೆಟ್ಟಿ ತನ್ನ ಸಪುರ ಸೊಂಟದಿಂದಲೇ ಹೆಸರಾದವರು. ಮಗುವಾದರೂ ಅದೇ ಸೌಂದರ್ಯ ಉಳಿಸಿಕೊಂಡು ಬಂದವರು. ಹೊಟ್ಟೆಯ ಕೊಬ್ಬು ಕರಗಿಸಲು ಅವರೊಂದು ಸರಳ ಪಾನೀಯ ಹೇಳಿದ್ದಾರೆ. ಅದೇ ಕೋಕಂ. ಅದನ್ನು ಹೇಗೆ ಮಾಡುವುದು ಅನ್ನೋದನ್ನು ನೋಡೋಣ.

ಕೋಕಂ ಅನ್ನು 3-4 ಗಂಟೆಗಳ ಕಾಲ ನೆನೆಸಿಡಬೇಕು. 4 ಟೀಸ್ಪೂನ್ ಕೋಕಂ ನೀರು, ಸ್ವಲ್ಪ ಶುಂಠಿ ಹಾಗೂ ಒಂದು ಸಣ್ಣ ಹಸಿಮೆಣಸನ್ನು ಸೇರಿಸಿ ಚೆನ್ನಾಗಿ ರುಬ್ಬಬೇಕು. ಅದನ್ನು ಸೋಸಿಡಿ. ಅದಕ್ಕೆ ಒಂದು ಕಪ್ ತೆಂಗಿನಕಾಯಿ ಹಾಲಿಗೆ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಐಸ್ ಕ್ಯೂಬ್ ಗಳನ್ನು ಹಾಕಿ ಕುಡಿಯಿರಿ. ಇದರಲ್ಲಿ ಅತ್ಯಂತ ಕಡಿಮೆ ಕ್ಯಾಲರಿ ಇದ್ದು, ತೂಕ ಇಳಿಕೆಗೆ ಸಹಕಾರಿ.


ಸಂಬಂಧಿತ ಟ್ಯಾಗ್ಗಳು

Shilpa Shetty Kokum Weight Loss Calories


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ