ದೀಪಿಕಾ ಗಾಲಾ ಡ್ರೆಸ್ ಗೆ ರಣವೀರ್ ಕಮೆಂಟ್ ಏನು ಗೊತ್ತಾ?

Ranveer Said What Everyone Was Thinking About Deepika

08-05-2019

ಅಮೆರಿಕದ ನ್ಯೂಯಾರ್ಕ್ ನಲ್ಲಿ ನಡೆದ ಮೆಟ್ ಗಾಲಾ 2019 ರಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಲಲನೆಯರನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಇನ್ನು ಗಾಲಾದಲ್ಲಿ ಗಮನ ಸೆಳೆದ ಬಾಲಿವುಡ್ ನ ದೀಪಿಕಾ ಪಡುಕೋಣೆಗೆ ಹೊಗಳಿಕೆಯ ಮಹಾಪೂರವೇ ಹರಿದುಬರುತ್ತಿದೆ.

ತಿಳಿ ಗುಲಾಬಿ ಬಣ್ಣದ ಗೌನ್ ನಲ್ಲಿ ಥೇಟ್ ಬಾರ್ಬಿ ಡಾಲ್ ನಂತೆ ಕಾಣುವ ಡಿಪಿ ಲುಕ್ ಗೆ ಅವರ ಪತಿ ಕೂಡ ಫಿದಾ ಆಗಿದ್ದಾರೆ. ಸದಾ ಪತ್ನಿ ದೀಪಿಕಾರನ್ನು ಹೊಗಳುವ ರಣವೀರ್ ಸಿಂಗ್ ಪತ್ನಿಯ ಗಾಲಾ ಡ್ರೆಸ್ ಗೆ ಸಖತ್ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ.

ಸಾಮಾಜಿಕ ಜಾಲತಾನ ಇನ್ ಸ್ಟಾಗ್ರಾಂ ನಲ್ಲಿ ದೀಪಿಕಾ ಹಾಕಿದ್ದ ಪೋಟೋಕ್ಕೆ ಬಾ ಬಾರ್ಬಿ, ಪಾರ್ಟಿ ಮಾಡೋಣ.. ಕ್ವೀನ್.. ಅಂತಾ ಕಮೆಂಟ್ ಮಾಡೋದ್ರ ಮೂಲಕ ತನ್ನ ಪ್ರೀತಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Deepika Padukone Ranveer Singh Met Gala New York


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ