ಜಂಕ್ ಫುಡ್ ಧೂಮಪಾನಕ್ಕಿಂತ ಹಾನಿಕರ..!

Eating junk food is killing people more than smoking

07-05-2019

ಜಂಕ್ ಫುಡ್ ತಿನ್ನೋದು ಆರೋಗ್ಯಕ್ಕೆ ಒಳ್ಳೇದಲ್ಲ ಅನ್ನೋದನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಆದರೆ ಅದರ ರುಚಿಗೆ ಮಾರುಹೋಗಿ ಒಳ್ಳೆಯದಲ್ಲ ಎಂದರೂ ತಿನ್ನುವವರೇ ಬಹಳ. ಆದರೆ ಇದು ಎಷ್ಟರ ಮಟ್ಟಿಗೆ ಆರೋಗ್ಯಕ್ಕೆ ಕೆಟ್ಟದ್ದು ಎಂದರೆ ಧೂಮಪಾನಕ್ಕಿಂತ ಸಿಗರೇಟ್ ಗಿಂತಲೂ ಅಪಾಯಕಾರಿ ಎನ್ನುತ್ತಾರೆ ಸಂಶೋಧಕರು.

ಹೃದಯದ ತೊಂದರೆ, ಹಾರ್ಟ್ ಅಟ್ಯಾಕ್, ಟೈಪ್ 2 ಡಯಾಬಿಟೀಸ್ ಮುಂತಾದ ಆರೋಗ್ಯ ಸಂಬಂಧಿ ತೊಂದರೆಗಳು ಜಂಕ್ ಫುಡ್ ಗಳಿಂದ ಬರುವಂಥವರು. ಚಿಪ್ಸ್, ಕೋಲಾ, ಡೋನಟ್ಸ್, ಚಾಕೊಲೇಟ್ಸ್ , ಕೇಕ್  ಮುಂತಾದ ಜಂಕ್ ಫುಡ್ ತಿನ್ನುವುದು ಹಾಗೂ ಅನಾರೋಗ್ಯಕರ ಲೈಫ್ ಸ್ಟೈಲ್ ನಿಂದಾಗಿ 11 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಇದು ಧೂಮಪಾನದಿಂದಾಗಿ ಸಾವನ್ನಪ್ಪುವವರ ಸಂಖ್ಯೆಗಿಂತ ದೊಡ್ಡದು.  

ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಇವಾಲ್ಯುಯೇಶನ್ ಈ ಸಂಶೋಧನೆ ನಡೆಸಿದ್ದು,

195 ದೇಶಗಳಲ್ಲಿನ ಆಯ್ದ ಜನರನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿದೆ.


ಸಂಬಂಧಿತ ಟ್ಯಾಗ್ಗಳು

Smoking Health Junk food Risk


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ