ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ನಿಶ್ಚಿತ..?

Sumalatha to Win against Nikhil ..?

06-05-2019

ಇಡೀ ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ಹಾಗೂ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿರುವುದು ಗೊತ್ತೇ ಇದೆ. ಆದರೆ ಮಂಡ್ಯ ಜನರು ಸುಮಲತಾ ಪರ ನಿಲ್ಲುತ್ತಾರೋ ಅಥವಾ ನಿಖಿಲ್ ಗೆ ಜೈ ಎನ್ನುತ್ತಾರೋ ಎಂಬ ಕುತೂಹಲ ರಾಷ್ಟ್ರಮಟ್ಟದಲ್ಲಿ ಗರಿಗೆದರಿದ್ದು ಸುಳ್ಳಲ್ಲ. ಆದರೆ ನಿಖಿಲ್ ಸೋಲನ್ನಪ್ಪುತ್ತಾರೆ ಅನ್ನೋ ಬಗ್ಗೆ ಸದ್ಯ ರಾಜ್ಯ ರಾಜಕಾರಣದಲ್ಲಿ ಮಾತುಗಳು ಕೇಳಿಬರುತ್ತಿವೆ.

ಹೌದು, ಮಂಡ್ಯದಲ್ಲಿ ಸುಮಲತಾ ಗೆಲುವಿನ ನಗೆ ಬೀರುತ್ತಾರೆ ಹಾಗೂ ನಿಖಿಲ್ ಸೋಲ್ತಾರೆ ಅನ್ನೋ ಬಗ್ಗೆ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ಜೆಡಿಎಸ್ ಮುಖಂಡರು ಹಾಗೂ ಸ್ವತಃ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರೇ ಈ ಸತ್ಯವನ್ನು ಅರಗಿಸಿಕೊಂಡಂತೆ ಕಾಣುತ್ತಿದೆ.

ಆದ್ರೆ ಯಾರಿಗೆ ಗೆಲುವು, ಯಾರಿಗೆ ಸೋಲು ಎನ್ನುವುದು ಅಧಿಕೃತವಾಗಿ ಘೋಷಣೆಯಾಗಲು ಮೇ 23 ರ ವರೆಗೆ ಕಾಯಲೇಬೇಕಿದೆ.


ಸಂಬಂಧಿತ ಟ್ಯಾಗ್ಗಳು

Nikhil Kumaraswamy Mandya Sumalatha Ambareesh Election


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ