ಮಧ್ಯಾಹ್ನದ ಬೆಕ್ಕಿನ ನಿದ್ದೆ ಆರೋಗ್ಯಕ್ಕೆ ಒಳ್ಳೆಯದು..!

Benefits of napping

06-05-2019

ಮಧ್ಯಾಹ್ನದ ಹೊತ್ತು ಪುಟ್ಟ ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದರಿಂದ ನಿಮ್ಮ ಮೂಡ್ ಮತ್ತೆ ರಿಫ್ರೆಶ್ ಆಗುತ್ತದೆ ಅನ್ನೋದು ಇತ್ತೀಚಿನ ಸಂಶೋಧನೆಯಿಂದ ಮತ್ತೆ ದೃಢಪಟ್ಟಿದೆ.

ಹೌದು, ಮಧ್ಯಾಹ್ನದ ಬಳಿಕ 15 ರಿಂದ 30 ನಿಮಿಷ ಮಲಗುವುದರಿಂದ, ಕೆಲಸದ ಒತ್ತಡದ ಮೆದುಳಿಗೆ ಸ್ವಲ್ಪ ಮಟ್ಟಿಗಿನ ವಿರಾಮ ಸಿಗುತ್ತದೆ ಹಾಗೂ ಇದರಿಂದ ಮತ್ತೆ ಕೆಲಸ ಮಾಡೋಕೆ ಉತ್ಸಾಹ ಬರುತ್ತದೆ ಎನ್ನುತ್ತಾರೆ ತಜ್ಞರು.

ಮಧ್ಯಾಹ್ನದ ಹೊತ್ತು 15 ನಿಮಿಷದ ಪುಟ್ಟ ನಿದ್ದೆ ಮಾಡುವುದರಿಂದ ಮೆದುಳಿನ ಜಾಗೃತ ಸ್ಥಿತಿ ಹೆಚ್ಚುತ್ತದೆ ಎನ್ನಲಾಗಿದೆ. ಅಲ್ಲದೇ ಇದು ನಿರಾಸಕ್ತಿ ಹಾಗೂ ಕಡಿಮೆ ನಿದ್ದೆಯಿಂದಾದ ಆಲಸ್ಯವನ್ನು ಹೋಗಲಾಡಿಸುತ್ತದೆ. ನೀವು ಮಾಡುವ ಬೆಕ್ಕಿನ ನಿದ್ದೆಯಿಂದ ಹೃದಯ ಇನ್ನೂ ಚೆನ್ನಾಗಿ ಕಾರ್ಯನಿರ್ವಹಿಸಬಲ್ಲದು. ಜೊತೆಗೆ ಇದು ಹೃದ್ರೋಗ ಸಮಸ್ಯೆಗಳಿಗೂ ಒಳ್ಳೆಯದು ಎನ್ನುತ್ತಾರೆ ವೈದ್ಯರು.  


ಸಂಬಂಧಿತ ಟ್ಯಾಗ್ಗಳು

Sleep Health Napping Heart


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ