ಮೇ 6 ರಂದು ಪ್ರಧಾನಿಯಿಂದ ಒಡಿಶಾ ಪರಿಸ್ಥಿತಿ ಪರಿಶೀಲನೆ

PM Modi to visit Odisha on May 6 to take stock of the situation

04-05-2019

ಭೀಕರ ಚಂಡಮಾರುತ ಫೋನಿಯಿಂದಾಗಿ ಒಡಿಶಾ ಅಕ್ಷರಶಃ ತತ್ತರಿಸಿದೆ. 1 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದರೂ 8 ಮಂದಿ ಸಾವನ್ನಪ್ಪಿದ್ದಾರೆ.

ಭಾರೀ ಗಾಳಿ ಹಾಗೂ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಬಹುಮಹಡಿ ಕಟ್ಟಡಗಳು ತರಗೆಲೆಯಂತೆ ಉರುಳಿವೆ. ಮರಗಳು, ಮನೆಗಳು ಧರೆಗುರುಳಿವೆ. ಕಾರ್, ಬಸ್ ಸೇರಿದಂತೆ ವಾಹನಗಳು ಹಾರಿ ಹೋಗಿವೆ. ಚಂಡಮಾರುತದಿಂದಾಗಿ ನೂರಾರು ಕೋಟಿ ನಷ್ಟವಾಗಿದೆ.

ಈ ಮಧ್ಯೆ ನಾಡಿದ್ದು, ಮೇ 6 ರಂದು ಪ್ರಧಾನಿ ನರೇಂದ್ರ ಮೋದಿ ಒಡಿಶಾಕ್ಕೆ ಭೇಟಿ ನೀಡಲಿದ್ದು, ಪರಿಸ್ಥಿತಿ ಪರಿಶೀಲನೆ ನಡೆಸಲಿದ್ದಾರೆ.  


ಸಂಬಂಧಿತ ಟ್ಯಾಗ್ಗಳು

PM Modi Fani Odisha Cyclone


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ