ಅನ್ನ ಸೇವಿಸುವುದರಿಂದ ಸ್ಥೂಲಕಾಯ ತಡೆಯಬಹುದು..!

Eating rice may help fight obesity..!

02-05-2019

ಅನ್ನ ಊಟ ಮಾಡೋದ್ರಿಂದ ದಪ್ಪಗಾಗ್ತಾರೆ. ಡಯಟ್ ಮಾಡಬೇಕೆಂದರೆ ಅನ್ನವನ್ನು ಬಿಡಲೇಬೇಕು ಅನ್ನೋದು ಇತ್ತೀಚಿಗೆ ಎಲ್ಲ ಕಡೆ ಕೇಳಿಬರುತ್ತಿರೋ ಮಾತು. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ ಅನ್ನ ಸೇವಿಸೋದ್ರಿಂದ ಸ್ಥೂಲಕಾಯದ ವಿರುದ್ಧ ಹೋರಾಟಬಹುದು ಎನ್ನುತ್ತಿದ್ದಾರೆ ಅಧ್ಯಯನಕಾರರು.

ಹೌದು.. ಇತ್ತೀಚಿಗೆ ಮುಂದುವರಿದ 136 ದೇಶಗಳಲ್ಲಿ ಗ್ರಾಂ ಲೆಕ್ಕದಲ್ಲಿ ಅನ್ನವನ್ನು ಸೇವಿಸಿದವರು ಹಾಗೂ ಅವರ ಸ್ಥೂಲಕಾಯತೆ ಬಗ್ಗೆ ಅಧ್ಯಯನ ನಡೆಸಲಾಗಿದೆ. ದಿನವೊಂದಕ್ಕೆ 50 ಗ್ರಾಂ ನಷ್ಟು ಅನ್ನವನ್ನು ಸೇವಿಸಿದವರಲ್ಲಿ 1 ಪರ್ಸೆಂಟ್ ನಷ್ಟು ಒಬೆಸಿಟಿ ಕಡಿಮೆಯಾಗಿದ್ದು ಕಂಡುಬಂದಿದೆ.

ಅನ್ನದಲ್ಲಿರುವ ಫೈಬರ್, ಪೋಷಕಾಂಶಗಳು ಹೊಟ್ಟೆ ತುಂಬಿದಂತಾಗಿ ಹೆಚ್ಚು ಆಹಾರ ತೆಗೆದುಕೊಳ್ಳುವುದನ್ನು ತಡೆಯುತ್ತದೆ ಎನ್ನುತ್ತಾರೆ ಆಹಾರ ತಜ್ಞರು.

ಅಲ್ಲದೇ ಅನ್ನದಲ್ಲಿ ಕಡಿಮೆ ಕೊಬ್ಬಿನಂಶ ಇರುವುದರಿಂದ ಅದು ಬಹುಬೇಗ ಜೀರ್ಣವಾಗುತ್ತದೆ. ಇದರಿಂದ ಸ್ಥೂಲಕಾಯದ ಪ್ರಶ್ನೆಯೇ ಉದ್ಭವಿಸದು ಎನ್ನುತ್ತಾರೆ ವೈದ್ಯರು.


ಸಂಬಂಧಿತ ಟ್ಯಾಗ್ಗಳು

Rice Obesity Study Health


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ